ಬಿಹಾರ್ನ ಆಡಳಿತಾರೂಢ ಜೆಡಿಯುನ ಶಾಸಕ ಶ್ಯಾಮ್ ಬಹಾದ್ದೂರ್ ಸಿಂಗ್ ಬಾರ್ ಗರ್ಲ್ಸ್ ಜೊತೆ ಅಸಭ್ಯವಾಗಿ ನೃತ್ಯ ಮಾಡುತ್ತ ಮತ್ತೆ ಸಿಕ್ಕಿ ಬಿದ್ದಿದ್ದು ಸರ್ಕಾರಕ್ಕೆ ಮುಜುಗರವನ್ನು ತಂದೊಡ್ಡಿದ್ದಾರೆ. ಈ ದೃಶ್ಯಾವಳಿಗಳುಳ್ಳ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.