ರಂಜಾನ್ ಉಪವಾಸದಲ್ಲಿದ್ದ ಮುಸ್ಲಿಂ ಸಿಬ್ಬಂದಿಗೆ ಚಪಾತಿ ತಿನ್ನಿಸಿದ ಶಿವಸೇನೆ ಸಂಸದ

ಬುಧವಾರ, 23 ಜುಲೈ 2014 (15:07 IST)
ಮಹಾರಾಷ್ಟ್ರ ಸಚಿವಾಲಯದಲ್ಲಿ ಉದ್ಯೋಗಿಯಾಗಿರುವ ರಮ್‌ಜಾನ್ ಉಪವಾಸ ನಿರತ ಮುಸ್ಲಿಂ ನೌಕರನೊಬ್ಬನಿಗೆ ಠಾಣೆ ಲೋಕಸಭಾ ಕ್ಷೇತ್ರದ ಶಿವಸೇನಾ ಸಂಸದ ರಾಜನ್ ವಿಚಾರೆ ಬಲವಂತವಾಗಿ ಚಪಾತಿ ತಿನ್ನಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ದೇಶಾದ್ಯಂತ ತೀವೃ ಚರ್ಚೆಗೆ ಗ್ರಾಸವಾಗಿದೆ. 

ವಿಡಿಯೋ ದ್ರಶ್ಯಾವಳಿಗಳು ಶಿವಸೇನಾ ನಾಯಕ ಸಚಿವಾಲಯದ ನೌಕರನಿಗೆ ಬಲವಂತವಾಗಿ ಚಪಾತಿ ತಿನ್ನುವಂತೆ ಮಾಡಿದ್ದನ್ನು ಸಾಬೀತು ಪಡಿಸಿದರೂ  ಶಿವಸೇನೆ ಇದನ್ನು ಅಲ್ಲಗಳೆದಿದೆ. ಈ ಕುರಿತು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಅನಂತ ಗೀತೆ ವಿರೋಧ ಪಕ್ಷಗಳ ಈ ಆರೋಪ ಸುಳ್ಳು ಎಂದಿದ್ದಾರೆ. 
 
"ಈ ರಮ್‌ಜಾನ್  ಶುಭಕಾರಕ ತಿಂಗಳು. ರಮ್‌ಜಾನ್‌ಗೆ ಎಲ್ಲರೂ ಗೌರವ ಕೊಡಬೇಕು ಮತ್ತು ರಮ್‌ಜಾನ್‌ಗೆ ಗೌರವ ಕೊಡಲು ಬಯಸುವವರು ಕನಿಷ್ಠ  ಸದನದ ದಾರಿತಪ್ಪಿಸುವ ಕಾರ್ಯಗಳನ್ನು ಮಾಡಬಾರದು ಎಂದು ಗೀತೆ  ಹೇಳಿದರು. ಅವರ ಮಾತುಗಳನ್ನು ವಿರೋಧಿಸಿದ ಪ್ರತಿಪಕ್ಷದವರು  ಈ ವಿಷಯದ ಕುರಿತ ಚರ್ಚೆಯನ್ನು ಮುಂದುವರೆಸುವಂತೆ ಒತ್ತಾಯಿಸಿದರು. 
 
ಮಹಾರಾಷ್ಟ್ರ ಸದನದಲ್ಲಿ ಮಹಾರಾಷ್ಟ್ರದ ಆಹಾರವನ್ನು ತಯಾರು ಮಾಡದ ಕಾರಣಕ್ಕೆ ಕ್ರೋಧಗೊಂಡ  ಶಿನಸೇನಾ ನಾಯಕ ಈ ಕೃತ್ಯವನ್ನೆಸಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಅಸಮಾಧಾನಗೊಂಡ  ಸದನಕ್ಕೆ ಊಟ ಪೂರೈಕೆ ಮಾಡುತ್ತಿದ್ದ ಭಾರತೀಯ ರೈಲ್ವೆ ಅಂಗಸಂಸ್ಥೆ, ಪ್ರತಿಭಟನೆ ರೂಪವಾಗಿ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ತನ್ನ ಆಹಾರ ಪೂರೈಕೆಯನ್ನು ನಿಲ್ಲಿಸಿತು.

ವೆಬ್ದುನಿಯಾವನ್ನು ಓದಿ