ಸುಪ್ರೀಂಕೋರ್ಟ್`ನಲ್ಲಿ ಕಾವೇರಿ ಐತೀರ್ಪಿನ ಮೇಲ್ಮನವಿ ಅರ್ಜಿಗಳ ವಿಚಾರಣೆ ಆರಂಭ

ಮಂಗಳವಾರ, 11 ಜುಲೈ 2017 (11:36 IST)
ಕಾವೇರಿ ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದಿನಿಂದ ಸುಪ್ರೀಂಕೋರ್ಟ್`ನಲ್ಲಿ ಆರಂಭವಾಗಿದೆ. ಕರ್ನಾಟಕದ ಪರ ಫಾಲಿ ನಾರಿಮನ್ ನೇತೃತ್ವದ ವಕೀಲರ ತಂಡ ವಾದ ಮಂಡಿಸಲಿದೆ.

ಕಾವೇರಿ ಕೊಳ್ಳದಲ್ಲಿ ಲಭ್ಯವಿರುವ 740 ಟಿಎಂಸಿ ನೀರು ಲಭ್ಯವಿದ್ದು ತಮಿಳುನಾಡಿಗೆ 419, ಕರ್ನಾಟಕಕ್ಕೆ 270, ಕೇರಳಕ್ಕೆ 30 ಮಯತ್ತು ಪುದುಚೇರಿಗೆ 7 ಟಿಎಂಸಿ ನೀರನ್ನ ನ್ಯಾಯಾಧಿಕರಣ ತೀರ್ಪು ನೀಡಿತ್ತು. ತಮಿಳುನಾಡಿಗೆ ಹೆಚ್ಚು ನೀರಿನ ಪ್ರಮಾಣ ನೀಡಿರುವುದನ್ನ ರಾಜ್ಯ ಸರ್ಕಾರ ಪ್ರಶ್ನಿಸಿದೆ. ಈ ತೀರ್ಪಿನ ಪ್ರಕಾರ ಕರ್ನಾಟಕ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಬೇಕು. ಮಳೆ ಇಲ್ಲದ ಸಂದರ್ಭ ಎಷ್ಟು ನಿರು ಬಿಡಬೇಕೆಂಬ ಬಗ್ಗೆ ಸ್ಪಷ್ಟನೆ ಇಲ್ಲ. ಜೊತೆಗೆ ಕಾವೇರಿ ಕೊಳ್ಳದಲ್ಲೇ ಬರುವ ಬೆಂಗಳೂರಿಗೆ ಕುಡಿಯುವ ನಿರು ಒದಗಿಸುವ ಕುರಿತಂತೆ ಒಂದು ಭಾಗವನ್ನ ಮಾತ್ರ ಪರಿಗಣಿಸಲಾಗಿದೆ ಎಂಬುದು ಕರ್ನಾಟಕ ವಾದ.

ಇತ್ತ, ತಮಿಳುನಾಡು ಸಹ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚು ತಮಿಳುನಾಡಿನ ನೀರಾವರಿ ಪ್ರದೇಶ ಬರುತ್ತಿದ್ದು, ನಮಗೆ ಇನ್ನಷ್ಟು ನೀರಿನ ಪಾಲು ನೀಡಬೇಕೆಂದು ವಾದಿಸಲಿದೆ.

ಇಂದಿನಿಂದ ಪ್ರತಿದಿನ ಕಾವೇರಿ ಐತೀರ್ಪಿನ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.  ಈ ಮಧ್ಯೆ, ಕಾವೇರಿ ಐತೀರ್ಪಿನ ವಿಚಾರಣೆ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಕೆಆರ್ಎಸ್ ಸುತ್ತಮುತ್ತ ಪೊಲಿಸ್ ಸರ್ಪಗಾವಲು ಹಾಕಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ