ಪತ್ನಿಯನ್ನ ಕೊಂದು ಅಪಘಾತದ ಕಥೆ ಕಟ್ಟಿದ್ದ ಎಸ್`ಪಿ ನಾಯಕನ ಬಣ್ಣ ಬಯಲು ಮಾಡಿದ ಸಿಬಿಐ

ಭಾನುವಾರ, 19 ಫೆಬ್ರವರಿ 2017 (10:31 IST)

ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ್ದ ಸಮಾಜವಾದಿ ಪಕ್ಷದ ಮುಖಂಡ ಅಮನ್ಮಾಣಿ ತ್ರಿಪಾಠಿ ಬಣ್ಣವನ್ನ ಸಿಬಿಐ ಸಲ್ಲಿಸಿರುವ ಚಾರ್ಜ್ ಶಿಟ್ ಬಯಲು ಮಾಡಿದೆ ಎಂದು ಡಿಎನ್`ಎ ವರದಿಮಾಡಿದೆ. 


ತ್ರಿಪಾಠಿ ತನ್ನ ಪತ್ನಿ ಸಾರಾಳಿಗೆ ದೈಹಿಕ ಹಿಂಸೆ ಕೊಟ್ಟು ಕೊಂದಿದ್ದಾನೆ ಬಳಿಕ ಅಪಘಾತದ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಸಿಬಿಐ ಚಾರ್ಜ್ ಶೀಟ್`ನಲ್ಲಿ ಉಲ್ಲೀಖಿಸಲಾಗಿದೆ.

`ಸಾರಾ ಸಿಂಗ್`ಗೆ ಆರೋಪಿಯು ದೈಹಿಕ ಹಿಂಸೆ ನೀಡಿ ಕ್ರೌರ್ಯ ಮೆರೆದಿರುವುದು ತನಿಖೆ ವೇಳೆ ಧೃಡಪಟ್ಟಿದೆ.  ಜುಲೈ 9 2015ರಂದೇ ಸಾರಾಳನ್ನ ಕೊಂದ ಪತಿ ಮೊದಲೇ ಪ್ಲಾನ್ ಮಾಡಿದಂತೆ ಅಪಘಾತದ ಕಥೆ ಕಟ್ಟಿದ್ದಾನೆ’ ಎಂದು ಸಿಬಿಐ ವಕ್ತಾರ ಆರ್,ಕೆ, ಸ್ಪಷ್ಟಪಡಿಸಿದ್ದಾರೆ.

 2013ರಲ್ಲಿ ತ್ರಿಪಾಠಿ ಸಾರಾಳನ್ನ ವಿವಾಹವಾಗಿದ್ದ. 2015ರಲ್ಲಿ ದಂಪತಿ ಲಖನೌಗೆ ತೆರಳುತ್ತಿದ್ದ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆದರೆ, ಅದೇ ಕಾರಿನಲ್ಲಿದ್ದ ತ್ರಿಪಾಠಿಗೆ ಒಂದು ಸಣ್ಣ ಗಾಯವೂ ಆಗದಿರುವ ಬಗ್ಗೆ ಸಾರಾ ತಾಯಿ ಸೀಮಾ ಸಿಂಗ್`ಗೆ ಅನುಮಾನ ಹುಟ್ಟಿತ್ತು. ಪ್ರಕರಣದ ತನಿಖೆಗೆ ಒತ್ತಾಯಿಸಿ ಸೀಮಾ ಕೇಸ್ ದಾಖಲಿಸಿದ್ದರು. ಬಳಿಕ ಕೇಸ್ ಸಿಬಿಐಗೆ ವರ್ಗಾವಣೆಗೊಂಡಿತ್ತು. ಇದೀಗ, ಪ್ರಕರಣ ಭೇದಿಸಿರುವ ಸಿಬಿಐ ಚಾರ್ಜ್`ಶಿಟ್ ಸಲ್ಲಿಸಿದೆ.

 

ವೆಬ್ದುನಿಯಾವನ್ನು ಓದಿ