ಹಿಮಾಚಲ ಪ್ರದೇಶ್ ಸಿಎಂ ಮನೆ ಮೇಲೆ ಸಿಬಿಐ ದಾಳಿ

ಶನಿವಾರ, 26 ಸೆಪ್ಟಂಬರ್ 2015 (17:10 IST)
ಅಕ್ರಮ ಆಸ್ತಿ ಗಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ನಿವಾಸದ ಮೇಲೆ ಶನಿವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ
 
ಚಂಡೀಘಡ ಹಾಗೂ ಪಂಜಾಬ್ ರಾಜ್ಯದ ನೋಂದಣಿ ಸಂಖ್ಯೆಗಳುಳ್ಳ ವಾಹನದಲ್ಲಿ ಬಂದ ಅಧಿಕಾರಿಗಳು ಇಂದು ಬೆಳಿಗ್ಗೆ ಜಖು ಬೆಟ್ಟದಲ್ಲಿರುವ ಶ್ರೀ ವೀರಭದ್ರ ಸಿಂಗ್ ಅವರ ಖಾಸಗಿ ನಿವಾಸ, ಹೋಲಿ ಲಾಡ್ಜ್ ಮೇಲೆ ದಾಳಿ ನಡೆಸಿತು.
 
ಹಿಮಾಚಲ ಪ್ರದೇಶ ಮತ್ತು ದೆಹಲಿಯ ನಿವಾಸ ಸೇರಿದಂತೆ 11 ಕಡೆ ಶೋಧಕಾರ್ಯಾಚರಣೆ ನಡೆಸಲಾಗಿದೆ ಎಂದು ನವದೆಹಲಿಯಲ್ಲಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
 
ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿಂಗ್ ಕುಟುಂಬದವರ್ಯಾರು ಮನೆಯಲ್ಲಿರಲಿಲ್ಲ. 
 
2009ರಿಂದ 2011ರ ಅವಧಿಯಲ್ಲಿ ಉಕ್ಕು ಸಚಿವರಾಗಿದ್ದ ಸಂದರ್ಭದಲ್ಲಿ ಸಿಂಗ್ ಅವರ ಕುಟುಂಬ ಸುಮಾರು 6.1 ಕೋಟಿ ರುಪಾಯಿ ಅಕ್ರಮ ಆಸ್ತಿ ಸಂಪಾದಿಸಿದೆ ಎಂಬ ಆರೋಪ ಕೇಳಿ ಬಂದಿದೆ. 

ವೆಬ್ದುನಿಯಾವನ್ನು ಓದಿ