ಸ್ಟಿಂಗ್ ಆಪರೇಶನ್: ಸಿಬಿಐ ಎದುರು ಹಾಜರಾದ ಹರೀಶ್ ರಾವತ್

ಮಂಗಳವಾರ, 7 ಜೂನ್ 2016 (19:35 IST)
ಉತ್ತರಖಾಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಸ್ಟಿಂಗ್ ಆಪರೇಶನ್ ಕುರಿತಂತೆ ಎರಡನೇ ಬಾರಿಗೆ ಸಿಬಿಐ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. 
 
ಸ್ಟಿಂಗ್ ಆಪರೇಶನ್ ಕುರಿತಂತೆ ಕೆಲ ಮಾಹಿತಿಗಳು ಲಾಭ್ಯವಾಗಿದ್ದರಿಂದ ಮಾಹಿತಿಗಳ ಬಗ್ಗೆ ವಿವರಣೆ ಪಡೆಯಲು ರಾವತ್ ಅವರನ್ನು ವಿಚಾರಣೆಗಾಗಿ ಕರೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
 
ಮೊದಲ ಬಾರಿ ವಿಚಾರಣೆಗೆ ಸಿಎಂ ರಾವತ್ ಹಾಜರಾದಾಗ ಎಲ್ಲ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ, ಎರಡನೇ ಬಾರಿಗೆ ಅವರನ್ನು ಕರೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. 
 
ಮುಖ್ಯಮಂತ್ರಿ ಹರೀಶ್ ರಾವತ್ ಯಾವ ವಿಷಯಗಳ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ.
 
ಸಿಬಿಐ ವಿಚಾರಣೆ ಎದುರಿಸಿ ಹೊರಬಂದ ರಾವತ್, ನಾನು ಕುದುರೆ ವ್ಯಾಪಾರದಲ್ಲಿ ತೊಡಗದಿರುವುದರಿಂದ ಯಾವುದೇ ಸಾಕ್ಷಾಧಾರ ನೀಡುವ ಅಗತ್ಯವಿಲ್ಲ. ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಿಲ್ಲ. ಮಾಧ್ಯಮಗಳನ್ನು ನಾನು ಗೌರವಿಸುತ್ತೇನೆ. ಆದರೆ, ಮಾಧ್ಯಮಗಳು ನನ್ನೊಂದಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿವೆ ಎಂದು ವಿಷಾದಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ