ಕಾಶ್ಮಿರ ಸಮಸ್ಯೆ ಇತ್ಯರ್ಥವಾಗುವವರಗೆ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಭೀಮ್ ಸಿಂಗ್

ಸೋಮವಾರ, 20 ಜುಲೈ 2015 (19:41 IST)
ಕಾಶ್ಮಿರದ ಸಮಸ್ಯೆ ಇತ್ಯರ್ಥವಾಗುವವರೆಗೆ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ನ್ಯಾಷನಲ್ ಪ್ಯಾಂಥರ್ ಪಾರ್ಟಿಯ ಅಧ್ಯಕ್ಷ ಭೀಮ್ ಸಿಂಗ್ ಹೇಳಿದ್ದಾರೆ.
 
ನಾನು ಹಲವಾರು ಬಾರಿ ಹೇಳಿದ್ದೇನೆ. ಪಾಕಿಸ್ತಾನ ಇದೇ ಮೊದಲ ಬಾರಿಗೆ ಕದನ ವಿರಾಮ ಉಲ್ಲಂಘಿಸುತ್ತಿಲ್ಲ. ಪಾಕ್ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಲೇ ಬಂದಿದೆ. ಪಾಕಿಸ್ತಾನ ಕಳೆದ ವರ್ಷ ಸ್ಥಳೀಯ ಪೊಲೀಸ್‌ನನ್ನು ಹತ್ಯೆ ಮಾಡಲು ಕಮಾಂಡೋನನ್ನು ಕಾಶ್ಮಿರಕ್ಕೆ ಕಳುಹಿಸಿತ್ತು.ಕಾಶ್ಮಿರ ಸಮಸ್ಯೆ ಪರಿಹಾರವಾಗುವವರೆಗೆ ಕದನ ವಿರಾಮ ಉಲ್ಲಂಘನೆಯಾಗುತ್ತಿರುತ್ತದೆ.
 
ಕೇಂದ್ರ ಸರಕಾರ ಆರ್ಟಿಕಲ್ 370ಗೆ ತಿದ್ದುಪಡಿ ತಂದು 35ಎ ಕಾನೂನು ರದ್ದುಗೊಳಿಸಿ ಜಮ್ಮು ಕಾಶ್ಮಿರವನ್ನು ಒಂದಾಗಿಸಿದಲ್ಲಿ ದೇಶದ ಅಂತಾರಾಷ್ಟ್ರೀಯ ನಿಲುವಿನಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.    
 
ನಿನ್ನೆ ಪೂಂಛ್ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಹಲವಾರು ಶಿಬಿರಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಜುಲೈ 15 ರಂದು ಇಲ್ಲಿಯವರೆಗೆ ಏಳು ಬಾರಿ ಪಾಕ್ ಕದನ ವಿರಾಮ ಉಲ್ಲಂಘಿಸಿದೆ. 

ವೆಬ್ದುನಿಯಾವನ್ನು ಓದಿ