ಮೋದಿ ಮಾವಿನ ಹಣ್ಣು: ಮೋದಿಯವರೇ ಇದನ್ನು ಮೊದಲು ತಿನ್ನಬೇಕಂತೆ!

ಗುರುವಾರ, 26 ಮಾರ್ಚ್ 2015 (17:49 IST)
ಉತ್ತರಪ್ರದೇಶ್ ಮೂಲದ ಮಾವಿನ ಹಣ್ಣಿನ ಬೆಳೆಗಾರ, ಪದ್ಮಶ್ರೀ ವಿಜೇತ ಹಾಜಿ ಕಲೀಮುಲ್ಲಾ  "ಮೋದಿ ಮ್ಯಾಂಗೋ" ಎಂಬ ವಿಶಿಷ್ಠ ಮಾವಿನಹಣ್ಣಿನೊಂದಿಗೆ ಸುದ್ದಿಯಲ್ಲಿದ್ದಾರೆ. ಭಿನ್ನ ರುಚಿಯ ಈ ಹಣ್ಣಿಗೆ ಪ್ರಧಾನಿ ಮೋದಿ ಹೆಸರಿಟ್ಟಿರುವುದರಿಂದ ಅವರಿದರ ರುಚಿ ನೋಡಿಯೇ ನೋಡುತ್ತಾರೆ. ಈ ಹಣ್ಣು ಅವರನ್ನು ತಲುಪುತ್ತದೆ ಎಂಬ ಆಶಯ ಅವರದು.
ಮೋದಿ ಮ್ಯಾಂಗೋಗಳು ಈಗಾಗಲೇ ಹಣ್ಣಾಗಿದ್ದು, ಅದನ್ನು ಪ್ರಧಾನಿಯವರಿಗಾಗಿ ಕಾದಿಟ್ಟಿದ್ದೇನೆ. ಆದರೆ ಅವರಿಗದನ್ನು ಹೇಗೆ ಕಳುಹಿಸುವುದು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಕಲಿಮುಲ್ಲಾ. ಪದ್ಮಶ್ರೀ ಪುರಷ್ಕೃತರಾಗಿರುವ ಕಲಿಮುಲ್ಲಾ ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲು ಮತ್ತು ಅವುಗಳಿಗೆ ಜನಪ್ರಿಯ ಹೆಸರುಗಳನ್ನು ಕೊಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. 
 
ನನ್ನ ಕೈಯ್ಯಾರೆ ಹಣ್ಣುಗಳ ರಾಜನಾದ ಮಾವನ್ನು ಮೋದಿಯವರಿಗೆ ನೀಡುವುದು ನನ್ನ ಬಯಕೆ. ಅವರಿದನ್ನು ಇಷ್ಟ ಪಡುತ್ತಾರೆ ಎಂಬ ವಿಶ್ವಾಸ ನನ್ನದು. ಅವರ ಹೆಸರೇ ಕೊಟ್ಟಿರುವ ಹಣ್ಣಿನ ರುಚಿ ಅವರಿಗೆ ಇಷ್ಟವಾದರೆ ಅದು ನನ್ನ ಪಾಲಿನ ದೊಡ್ಡ ಗೌರವ ಎಂದು ಕಲಿಮುಲ್ಲಾ ಹೇಳಿದ್ದಾರೆ. 
 
ಇದು ಅದ್ಭುತ ರುಚಿಯನ್ನು ಹೊಂದಿದ್ದು ನೋಡಲು ಕೂಡ ಸುಂದರವಾಗಿದೆ ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ