ಕೇಂದ್ರದಿಂದ 160 ರೇಲ್ವೆ ಯೋಜನೆಗಳಿಗೆ ಕತ್ತರಿ

ಮಂಗಳವಾರ, 25 ನವೆಂಬರ್ 2014 (09:14 IST)
ರಾಜ್ಯದ 14 ರೇಲ್ವೆ ಯೋಜನೆಗಳು ಸೇರಿದಂತೆ ದೇಶಾದ್ಯಂತ ಒಟ್ಟು 160 ಯೋಜನೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಯೋಜನೆಗಳ ಲಾಭಕರವಾಗಿರುವ ಕಡೆಗಳೆಲ್ಲ ಸ್ಥಗಿತದ ನಿರ್ಧಾರ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಗೆ ಈ ಯೋಜನೆಗಳಿಂದ ಭಾರಿ ನಷ್ಟವಾಗುತ್ತಿದೆ. ಆ ಕಾರಣ ಈ ಯೋಜನೆಗಳನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
 
ಸರ್ಕಾರದ ಈ ನಿರ್ಧಾರದಿಂದ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ತಲಾ 14 ಯೋಜನೆಗಳನ್ನು ಕಳೆದುಕೊಳ್ಳಲಿವೆ. 
 
ಬೆಂಗಳೂರು-ಸತ್ಯಮಂಗಲಂ, ಕೋಟಿಪಲ್ಲಿ-ನರಸಾಪುರ, ತುಮಕೂರು-ರಾಯದುರ್ಗ,ತುಮಕೂರು-ಚಿತ್ರದುರ್ಗ-ದಾವಣಗೆರೆ, ಹರಿಹರ-ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ 14 ಯೋಜನೆಗಳು ನಿಲುಗಡೆಗೊಳ್ಳಲಿವೆ.
 
ಈ ಯೋಜನೆಗಳಿಂದ ಕೇವಲ ನಷ್ಟವಾಗುತ್ತಿದ್ದು, ಸರಕಾರಕ್ಕೆ ಅನಾವಶ್ಯಕ ಹೊರೆಯಾಗಿವೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ