ಮಹಾ, ಹರಿಯಾಣಾ ಮುಖ್ಯಮಂತ್ರಿಗಳ ಆಯ್ಕೆಗೆ ಕೇಂದ್ರ ಸಚಿವರು ವೀಕ್ಷಕರು

ಸೋಮವಾರ, 20 ಅಕ್ಟೋಬರ್ 2014 (15:38 IST)
ಬಿಜೆಪಿಯಲ್ಲಿ ಉನ್ನತ ನಿರ್ಣಯ ಕೈಗೊಳ್ಳುವ ಸಂಸದೀಯ ಮಂಡಲಿ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡದೆ, ಎರಡು ರಾಜ್ಯಗಳ ವಿಧಾನಸಭೆಯಲ್ಲಿ ಆಯ್ಕೆಯಾಗಿರುವ ಶಾಸಕರುಗಳಲ್ಲಿ ಸಿ ಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವೀಕ್ಷಕರನ್ನು ನೇಮಿಸಿದೆ. 
 
ಬಿಜೆಪಿ ಗೃಹ ಸಚಿವ ರಾಜನಾಥ ಸಿಂಗ್ ಮತ್ತು ಪಕ್ಷದ ಕಾರ್ಯದರ್ಶಿ ಜೆ ಪಿ ನಡ್ಡಾ ಅವರನ್ನು ಮಹಾರಾಷ್ಟ್ರದ ವೀಕ್ಷಕರಾಗಿಯೂ, ಸಂಸದೀಯ ವ್ಯವಹಾರ ಸಚಿಯ ವೆಂಕಯ್ಯ ನಾಯ್ಡು ಮತ್ತು ಪಕ್ಷದ ಉಪಾಧ್ಯಕ್ಷ ದಿನೇಶ್ ಶರ್ಮ ಅವರನ್ನು ಹರಿಯಾಣದ ವೀಕ್ಷಕರಾಗಿ ನೇಮಿಸಲಾಗಿದೆ. ಈ ನಾಯಕರು ತಮ್ಮ ಉಸ್ತುವಾರಿ ರಾಜ್ಯಗಳಿಗೆ ಪ್ರವಾಸ ಮಾಡಿ ಸಿ ಎಂ ಅಭ್ಯರ್ಥಿಯ ಆಯ್ಕೆಯ ಮೇಲ್ವಿಚಾರಣೆ ಮಾಡಲಿದ್ದಾರೆ.
 
ಹರಿಯಾಣದಲ್ಲಿ ಸರ್ಕಾರ ರಚಿಸಲು ಎಲ್ಲವೂ ಸುಗಮವಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತದ ಕೊರತೆಯಿದೆ. ಇದಕ್ಕೆ ಬಿಜೆಪಿ ತನ್ನದೇ ಷರತ್ತುಗಳೊಂದಿಗೆ ಬಾಹ್ಯ ಬೆಂಬಲವನ್ನೋ ಅಥವಾ ಮತ್ತೊಂದು ಪಕ್ಷದ ಜೊತೆಗೂಡಿ ಸರ್ಕಾರ ರಚಿಸುವುದೋ ಎಂದು ಇನ್ನೂ ನಿರ್ಣಯಿಸಬೇಕಾಗಿದೆ.
 
ಭಾನುವಾರ ಸಾಯಂಕಾಲ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ನಡೆದ ಒಂದು ಘಂಟೆಯ ಸಭೆಯ ಅಂತ್ಯದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ "ನಾವಿನ್ನೂ ಹರಿಯಾಣ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆಯ್ಕೆಯ ವಿಚಾರದಲ್ಲಿ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ." ಎಂದಿದ್ದಾರೆ.  ಸಭೆಯಲ್ಲಿ ಪಕ್ಷನ ನಾಯಕರು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 
 

ವೆಬ್ದುನಿಯಾವನ್ನು ಓದಿ