ಒತ್ತಡಕ್ಕೆ ಮಣಿದು ಎಮ್ಮೆ ವಧೆಗೆ ಒಪ್ಪಿದ ಕೇಂದ್ರ ಸರ್ಕಾರ

ಮಂಗಳವಾರ, 30 ಮೇ 2017 (09:10 IST)
ನವದೆಹಲಿ: ದೇಶದಾದ್ಯಂತ ಗೋ ಹತ್ಯೆ ನಿಷೇಧದ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನಿಗೆ ಕೊಂಚ ಮಾರ್ಪಾಡು ತರಲು ನಿರ್ಧರಿಸಿದೆ. ಅದರಂತೆ ನಿಷೇಧಿತ ಜಾನುವಾರುಗಳ ಪಟ್ಟಿಯಿಂದ ಎಮ್ಮೆಯನ್ನು ಹೊರಗಿಟ್ಟಿದೆ.

 
ಹೀಗಾಗಿ ಎಮ್ಮೆ ವಧೆಗೆ ಒಪ್ಪಿಗೆ ನೀಡಿದೆ. ಪ್ರತಿಭಟನೆ ಹಿನ್ನಲೆಯಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಪುನರ್ ಪರಿಶೀಲಿಸಲು ಮುಂದಾಗಿರುವ ಸರ್ಕಾರ ನಿಷೇಧಿತ ಪಟ್ಟಿಯಿಂದ ಯಾವ್ಯಾವ ಪ್ರಾಣಿಗಳನ್ನು ಸೇರಿಸಬೇಕು ಮತ್ತು ಬಿಡಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದಾಗಿ ಕೇಂದ್ರ  ಪರಿಸರ ಖಾತೆ ಸಚಿವ ಎಂ.ಎನ್. ಝಾ ಹೇಳಿದ್ದಾರೆ.

ಮೇ 26 ರಂದು ಹೊರಡಿಸಿದ್ದ ಆದೇಶದಲ್ಲಿ ನಿಷೇಧಿತ ಪ್ರಾಣಿಗಳ ಪಟ್ಟಿಯಲ್ಲಿ, ಎಮ್ಮೆ, ಈಯುವ ಆಕಳು, ಗೂಳಿ ಮತ್ತು ಒಂಟೆ ಸೇರಿದ್ದವು. ಆದರೆ ಕೇರಳ ಮತ್ತು ಪ. ಬಂಗಾಲದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ಕೆಲವು ಮಾರ್ಪಾಡು ತರಲು ಉದ್ದೇಶಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ