ಗೋ ಹತ್ಯೆ ನಿಷೇಧಕ್ಕೆ ಕೇಂದ್ರದ ಅಂಕಿತ

ಶನಿವಾರ, 27 ಮೇ 2017 (09:25 IST)
ನವದೆಹಲಿ: ಬಹು ಚರ್ಚಿತ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಕೊನೆಗೂ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಇದರಿಂದ ಇನ್ನು ಮುಂದೆ ವಧಾಗೃಹಕ್ಕೆ ಗೋವುಗಳನ್ನು ಕೊಂಡೊಯ್ದರೆ 7 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸುವ ವಿಧೇಯಕಕ್ಕೆ ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

 
ಅಧಿಕಾರಕ್ಕೆ ಬಂದಾಗಿನಿಂದಲೂ ಗೋ ಹತ್ಯೆ ನಿಷೇಧ ಮಾಡುವುದಾಗಿ ಹೇಳುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಕೊನೆಗೂ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಹೇಳಿದಂತೆ ಮಾಡಿದೆ. ಅದರಂತೆ ಇನ್ನು, ಮುಂದೆ ಕೃಷಿ ಚಟುವಟಿಕೆಗಳ ಹೊರತಾಗಿ ಮಾಂಸಕ್ಕಾಗಿ ಗೋವುಗಳ ಮಾರಾಟ ಮಾಡುವಂತಿಲ್ಲ.

ಇದರಿಂದ ಗೋವುಗಳ ಮಾರಾಟ ಪ್ರಕ್ರಿಯೆ ಇನ್ನಷ್ಟು ಕ್ಲಿಷ್ಟವಾಗಲಿದೆ. ಒಂದು ವೇಳೆ ಕೃಷಿ ಉದ್ದೇಶಗಳಿಗೆ ಗೋವುಗಳನ್ನು ಮಾರಾಟ ಮಾಡುವುದಿದ್ದರೆ, ರೈತನೆಂಬ ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ. ವಿಶೇಷವೆಂದರೆ ಪರಿಸರ ಖಾತೆ ಸಚಿವರಾಗಿದ್ದ ಅನಿಲ್ ದಾವೆ ಸಾಯುವ ಕೆಲವೇ ದಿನಗಳ ಮೊದಲು ಗೋ ಹತ್ಯೆ ನಿಷೇಧಕ್ಕೆ ಸಹಿ ಹಾಕಿದ್ದರು.

ಆದರೆ ಸರ್ಕಾರದ ನಿರ್ಧಾರಕ್ಕೆ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಇದು ಇಡೀ ಉದ್ಯಮಕ್ಕೆ ಪೆಟ್ಟು ನೀಡಿದಂತಾಗಿದೆ ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ