ಓಝೋನ್ ಜಿಮ್ ಸಿಇವೊ ವಿರುದ್ಧ ಅತ್ಯಾಚಾರದ ಆರೋಪ, ಬಂಧನ

ಭಾನುವಾರ, 14 ಫೆಬ್ರವರಿ 2016 (14:22 IST)
ನವದೆಹಲಿ: ಭಾರತದಲ್ಲಿ ಶಾಖೆಗಳನ್ನು ಹೊಂದಿರುವ ಪ್ರಮುಖ ಜಿಮ್‌ನ ಸಿಇಒ ಅವರನ್ನು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.  ಆರೋಪಿ ಸ್ಕಾಟಿಶ್ ರಾಷ್ಟ್ರೀಯ ಲಾಮಂಟ್ ಓಝೋನ್ ಫಿಟ್‌ನೆಸ್ ''ಎನ್ ''ಸ್ಪಾದ ಸಿಇವೊ ಆಗಿದ್ದಾರೆ.

ಓಝೋನ್ ದೆಹಲಿಯ ಸುತ್ತಮುತ್ತ ಕನಿಷ್ಠ 6 ಕೇಂದ್ರಗಳನ್ನು ಹೊಂದಿದೆ. ದಕ್ಷಿಣ ದೆಹಲಿಯ ಸಿಆರ್‌ ಪಾರ್ಕ್‌ನಲ್ಲಿ ನೆಲೆಸಿರುವ ಮಹಿಳೆ ತಾನು ಆರೋಪಿಯನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದಾಗಿ ಹೇಳಿದ್ದಾಳೆ. ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀ
ಡಿದ್ದ ಆರೋಪಿ ತನ್ನ ಮೇಲೆ ಐದು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಸಂಬಂಧ ಕಡಿದುಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಈ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಲಾಗಿದ್ದು, ಆರೋಪಿಯನ್ನು ಕಳೆದ ರಾತ್ರಿ ಬಂಧಿಸಲಾಗಿದೆ. ಓಝೋನ್ ಆಡಳಿತ ಮಂಡಳಿಯನ್ನು ಈ ಕುರಿತು ಸಂಪರ್ಕಿಸಿದಾಗ ಬಂಧನ ಅಥವಾ ಆರೋಪದ ಕುರಿತು ತಾವು ಈ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ. 
 

ವೆಬ್ದುನಿಯಾವನ್ನು ಓದಿ