ವಂದೇ ಮಾತರಂ ಹೇಳಿ ಇಲ್ಲದಿದ್ರೆ ದೇಶ ತೊರೆಯಿರಿ ಎಂದ ವಿಎಚ್‌ಪಿ ನಾಯಕಿ

ಬುಧವಾರ, 18 ಮಾರ್ಚ್ 2015 (15:29 IST)
ಫೈರ್‌ಬ್ರಾಂಡ್ ವಿಎಚ್‌ಪಿ ನಾಯಕಿ  ಸಾಧ್ವಿ ಪ್ರಾಚಿ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತ್ ಮಾತಾ ಕಿ ಜೈ ಅಥವಾ ವಂದೇ ಮಾತರಂ ಅನ್ನದಿದ್ದವರು ದೇಶದಲ್ಲಿ ವಾಸಿಸಲು ಹಕ್ಕನ್ನು ಹೊಂದಿಲ್ಲ ಎನ್ನುವುದರ ಮೂಲಕ ಅವರು ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
 
ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ  ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು " ಯಾರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎನ್ನುವುದಿಲ್ಲವೋ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಾರೋ ಮತ್ತು ಗೋಹತ್ಯೆಯಲ್ಲಿ ಭಾಗಿಯಾಗುತ್ತಾರೋ ಅಂತವರು ಭಾರತದಲ್ಲಿ ಬದುಕಲು ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 
 
ತಮ್ಮ ಮಾತುಗಳನ್ನು ಮುಂದುವರೆಸಿದ ಅವರು ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ  ಮಾಡುವ ಹಕ್ಕನ್ನು ನೀಡಬಾರದು. ಈ ನಿಯಮ ಮುರಿದವರ ಮತದಾನದ ಹಕ್ಕನ್ನು ನಿರ್ಬಂಧಿಸಲು ಧರ್ಮದ ಹಿನ್ನೆಲೆಯನ್ನು ಪರಿಗಣಿಸದೇ ಕಠಿಣ ಕಾನೂನನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.  
 
ಈ ಮೊದಲು ಸಹ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಬೇರೆ ಸಮುದಾಯದ ಜನರು 40-50 ಮಕ್ಕಳನ್ನು ಹೇರುತ್ತಾರೆಂದರೆ  ಹಿಂದೂಗಳು ಸಹ ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎಂಬ ಅವರ ಹೇಳಿಕೆಗೆ ವಿರೋಧ ಪಕ್ಷಗಳು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದವು. 

ವೆಬ್ದುನಿಯಾವನ್ನು ಓದಿ