ಉತ್ತರ ಪ್ರದೇಶ್: ಶೀಘ್ರದಲ್ಲೇ ಕಾರ್ಮಿಕರಿಗೆ ಅಗ್ಗದ ಆಹಾರ

ಶನಿವಾರ, 20 ಸೆಪ್ಟಂಬರ್ 2014 (15:57 IST)
ರಾಜ್ಯದ ನೊಂದಾಯಿತ ಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಒದಗಿಸಲು ಸರಕಾರ ಶೀಘ್ರದಲ್ಲೇ ಹೊಸ ಯೋಜನೆಯೊಂದನ್ನು ಆರಂಭಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್  ಹೇಳಿದ್ದಾರೆ. 

ಕಾಂಟೀನ್ ಸ್ಥಾಪನೆಗೆ ಮತ್ತು ಸರ್ಕಾರಿ ಸ್ವಾಮ್ಯದ ಡೈರಿ ಘಟಕ ಪರಾಗ್‌ನಿಂದ ಮೊಸರು ಸೇರಿದಂತೆ, ಪೌಷ್ಟಿಕ ಆಹಾರ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 
 
ಕಾರ್ಮಿಕರು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ನಡುವಿನ ಮುಖ್ಯ ಕೊಂಡಿ ಎಂದ ಮುಖ್ಯಮಂತ್ರಿ ಅಪಘಾತ ವಿಮೆ ಹೆಚ್ಚಳ ಸೇರಿದಂತೆ ಕಾರ್ಮಿಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಲಿದೆ ಎಂದರು. 
 
ಅಲ್ಲದೇ ಅಖಿಲೇಶ್ ವಿವಿಧ ಯೋಜನೆಗಳ ಅಡಿಯಲ್ಲಿ ಎರಡು ಫಲಾನುಭವಿಗಳಿಗೆ ಮನೆ ದುರಸ್ತಿಗೆ ನಿಧಿ, 12 ಫಲಾನುಭವಿಗಳಿಗೆ 50,000 ರೂಪಾಯಿ ಚೆಕ್ ಮತ್ತು 500 ಫಲಾನುಭವಿಗಳಿಗೆ ಸೈಕಲ್ ವಿತರಿಸಿದರು. 
 
ಏತನ್ಮಧ್ಯೆ, ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಲ್ ಗೇಟ್ಸ್ ಜತೆ ಚರ್ಚಿಸಿದರು. ಯುಪಿ ಸರ್ಕಾರ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಕೈಗೊಂಡ ಜಂಟಿ ಕೃತಿಗಳ ಪ್ರಗತಿಗಳ ಕುರಿತು ಇಬ್ಬರು ಚರ್ಚಿಸಿದರು. ತಾವು ಕೈಗೊಂಡಿರುವ ಕಾರ್ಯಕ್ರಮಗಳಿಗೆ ಯುಪಿ ಸರಕಾರ ನೀಡುತ್ತಿರುವ ಬೆಂಬಲಕ್ಕೆ ಗೇಟ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ವೆಬ್ದುನಿಯಾವನ್ನು ಓದಿ