ಹೊಸ ವರ್ಷದ ವಿಶೇಷ: ಸ್ನೇಹಿತರಿಗಾಗಿ ಅಡುಗೆ ಭಟ್ಟನಾದ ಸಚಿನ್ ತೆಂಡೂಲ್ಕರ್

ಶುಕ್ರವಾರ, 2 ಜನವರಿ 2015 (18:04 IST)
ಬ್ಯಾಂಟಿಂಗ್ ಮಾಂತ್ರಿಕ ಸಚಿನ್ ಮಸ್ಸೂರಿಯಲ್ಲಿ ತಮ್ಮ ಪಾಕ ಕೌಶಲ್ಯವನ್ನು ಪ್ರದರ್ಶಿಸಿದರು.  ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಸ್ನೇಹಿತರಿಗಾಗಿ ಅವರು " ಬೈಗನ್ ಭರ್ತಾ"ವನ್ನು ಸಿದ್ಧ ಪಡಿಸಿದರು.
ನಿಯಮಿತವಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಅಪಡೇಟ್ ಮಾಡುವ ಸಚಿನ್  ತಮ್ಮ ಸ್ನೇಹಿತರಿಗಾಗಿ ತಾವು ಅಡುಗೆ ಮಾಡಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 
 
ಡಿಸೆಂಬರ್ 23 ರಂದು ತನ್ನ ಕುಟುಂಬದ ಜತೆ ಬ್ಯಾಟಿಂಗ್ ದಿಗ್ಗಜ ಮಸ್ಸೂರಿಗೆ ಬಂದಿಳಿದಿದ್ದಾರೆ. ಸಂಪೂರ್ಣವಾಗಿ ಭಿನ್ನವಾದ ವಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿರುವ ಸಚಿನ್ ಈ ಕುರಿತ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 
 
ನನ್ನ ಅಮ್ಮಹೇಳಿಕೊಟ್ಟ ಪಾಕವಿಧಾನದಂತೆ ನಾನು ನನ್ನ 45 ಜನ ಸ್ನೇಹಿತರಿಗಾಗಿ ' ಬೈಗನ್ ಭರ್ತಾ'ವನ್ನು ತಯಾರಿಸಿದೆ. ನಾನದನ್ನು ಪ್ರೀತಿಯಿಂದ ತಯಾರಿಸಿದ್ದೆ. ನನ್ನ ಗೆಳೆಯರೆಲ್ಲರೂ ಇದನ್ನು ಬಹುವಾಗಿ ಇಷ್ಟಪಟ್ಟರು ಎಂದು ಸಚಿನ್ ಹೇಳಿಕೊಂಡಿದ್ದಾರೆ. 
 
ಗುಡ್ಡಗಾಡು  ಪ್ರದೇಶಗಳಲ್ಲಿ ಲಾಂಗ್ ವಾಕ್ ಮತ್ತು ಟೆನ್ನಿಸ್ ಆಡುವುದನ್ನು ಸಚಿನ್ ಬಹುವಾಗಿ ಇಷ್ಟಪಡುತ್ತಾರೆ.  ಹೊಸ ವರ್ಷದ ಮೊದಲ ದಿನ ತಮಗೆ ಬಹಳ ಇಷ್ಟವಾದ ಸ್ಥಳಕ್ಕೆ ಭೇಟಿ ನೀಡಿರುವ ಸಚಿನ್ ಈ ರೀತಿ ಕಮೆಂಟ್ ಮಾಡಿದ್ದಾರೆ. " ಹ್ಯಾಪಿ ನ್ಯೂ ಇಯರ್". ಮಸ್ಸೂರಿಯ ಚಾರ್ ದುಖಾನ್‌ನಲ್ಲಿ ಬೆಳಗಿನ ಉಪಹಾರ. ಅದ್ಭುತ ರುಚಿಯ ಬನ್ ಆಮ್ಲೆಟ್ ಮತ್ತು ಮೊಸರು, ಉಪ್ಪಿನಕಾಯಿ ಜತೆಗೆ ಪರೋಟಾವನ್ನು ತಿಂದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ