ತುಂಬು ಗರ್ಭಿಣಿಯಾಗಿದ್ದ 25 ವರ್ಷದ ಸೋನಮ್ ಮತ್ತು ಆಕೆಯ ಪತಿ ನವದೆಹಲಿ ರೈಲು ನಿಲ್ದಾಣದಿಂದ ರೈಲನ್ನೇರಿದ್ದರು. ರೈಲು ಮಥುರಾ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಸೋನಮ್ ಪ್ರಸವ ವೇದನೆಯಿಂದ ನರಳಲು ಪ್ರಾರಂಭಿಸಿದ್ದಾಳೆ. ಆಕೆಯ ಈ ಸಂಕಷ್ಟದ ಸ್ಥಿತಿಯಲ್ಲಿ ಸ್ಪಂದಿಸಿದ ಸಹ ಪ್ರಯಾಣಿಕರು ದಂಪತಿಗಳಿಗೆ ತಮ್ಮಿಂದಾದ ಸಹಕಾರವನ್ನು ನೀಡಿದ್ದಾರೆ. ಹೀಗಾಗಿ ಆಕೆ ಸುಸೂತ್ರವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸುದ್ದಿಯನ್ನು ತಿಳಿದ ಜಿಆರ್‌ಎಫ್, ಆರ್‌ಆರ್‌ಎಫ್ ಮತ್ತು ವೈದ್ಯರ ತಂಡ ರೈಲು ಮಥುರಾ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸಹಾಯಕ್ಕಾಗಿ ಧಾವಿಸಿದೆ.
ಈ ಕುರಿತು ಮಾತನಾಡಿದ ಅವರು "ಭಾರತದ ಪ್ರಥಮ ಸೆಮಿ ಹೈಸ್ಪೀಡ್ ರೈಲು ಸೇವೆ ಗತಿಮಾನ್, ಸದ್ಯದಲ್ಲಿಯೇ ನವದೆಹಲಿ - ಆಗ್ರಾ ಮಾರ್ಗವಾಗಿ ಚಾಲನೆಗೊಳ್ಳಲಿದ್ದು ಆ ಕಾರಣಕ್ಕಾಗಿ ನಾವು ಮಗುವಿನ ಹೆಸರನ್ನು ‘ಗತಿಮಾನ್’ ಎಂದು ನಮ್ಮ ದಾಖಲೆಗಳಲ್ಲಿ ದಾಖಲಿಸಿಕೊಂಡೆವು", ಎಂದು ಹೇಳಿದ್ದಾರೆ.