ಪ್ರಾಣಿಗಳಿಗೆ ಮೀಸಲಾದ ಆಹಾರವನ್ನು ಅಂಗನವಾಡಿ ಮಕ್ಕಳಿಗೆ ತಿನ್ನಿಸಲಾಗುತ್ತಿದೆ: ಸಾಧ್ವಿ ಜ್ಯೋತಿ

ಶನಿವಾರ, 4 ಜುಲೈ 2015 (17:50 IST)
ಮಕ್ಕಳು ಮತ್ತು ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರದ ಹೆಸರಿನಲ್ಲಿ ಪ್ರಾಣಿಗಳಿಗೆ ಮೀಸಲಾದ ಆಹಾರ ಬಡಿಸಲಾಗುತ್ತದೆ ಎಂದು ಕೇಂದ್ರ ಆಹಾರ ಸಂಸ್ಕರಣೆ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಒಪ್ಪಿಕೊಂಡಿದ್ದಾರೆ. 

"ಇಂದೋರ್‌ನ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಸೋಯಾಬಿನ್ ಇರುವ ಆಹಾರವನ್ನು ನೀಡಬೇಕು", ಎಂದು ಅಭಿಪ್ರಾಯ ಪಟ್ಟಿದ್ದಾರೆ. 
 
"ಆಹಾರ ಸಂಸ್ಕರಣಾ ಘಟಕಗಳ ಕೊರತೆಗಳ ಬಗ್ಗೆ ಸಚಿವೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ರೈತರು ಉತ್ಪನ್ನಗಳಿಗೆ ಸರಿಯಾದ ಬೆಲೆಗೆ ಸಿಗುತ್ತಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ", ಎಂದು ಅವರು ಹೇಳಿದ್ದಾರೆ.
 
ಪ್ರಮುಖ ಆಹಾರ ಸಂಸ್ಕರಣಾ ಕಂಪನಿಯಾದ ರುಚಿ ಗುಂಪಿಗೆ, ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಆಹಾರ ಪಾರ್ಕ್ ತೆರೆಯಲು ಹಸಿರು ನಿಶಾನೆ ತೋರಿಸಲಾಗಿದೆ. ರಾಜ್ಯದಲ್ಲಿ ಇಂತಹ ಎರಡು ಘಟಕಗಳಿಗೆ ಕೇಂದ್ರ ಅನುಮತಿ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ .

ವೆಬ್ದುನಿಯಾವನ್ನು ಓದಿ