ನದಿಯಲ್ಲಿ ಈಜಿ ಶಾಲೆ ತಲುಪುವ ಮಕ್ಕಳು : ಗುಜರಾತ್ ಸರ್ಕಾರಕ್ಕೆ ನೋಟಿಸ್

ಬುಧವಾರ, 20 ಆಗಸ್ಟ್ 2014 (18:20 IST)
ಸುಮಾರು 100 ಮಕ್ಕಳು ಶಾಲೆಯನ್ನು ತಲುಪಲು ನದಿಯಲ್ಲಿ ಈಜುತ್ತಿರುವಂತಹ ಪರಿಸ್ಥಿತಿ ಏಕೆಂದು ವಿವರಣೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸೂಚಿಸಿದೆ. ಮಕ್ಕಳ ಶಿಕ್ಷಣ ಹಕ್ಕು ಮತ್ತು ಸುರಕ್ಷತೆಗೆ ಉಲ್ಲಂಘನೆಯಾಗಿದೆ ಎಂದು ಮಾಧ್ಯಮದಲ್ಲಿ ಬಂದಿರುವ ವರದಿಗಳನ್ನು ಕುರಿತು ಮಾನವ ಹಕ್ಕು ಆಯೋಗ ಪ್ರತಿಕ್ರಿಯಿಸಿದೆ.

ಗುಜರಾತಿನ ಬುಡಕಟ್ಟು ಗ್ರಾಮಗಳ ಸಮೂಹಕ್ಕೆ ಸೇರಿದ ಶಾಲಾ ಮಕ್ಕಳು ಹಿತ್ತಾಳೆ ಮಡಕೆಗಳನ್ನು ಕೈಯಲ್ಲಿ ಆಧಾರವಾಗಿ ಹಿಡಿದುಕೊಂಡು ನದಿಯಲ್ಲಿ ಈಜಿ ಇನ್ನೊಂದು ದಡ ಸೇರುತ್ತಿದ್ದರು. ರಸ್ತೆಯ ಮೂಲಕ ಹೋಗುವುದಾದರೆ ಚೋಟಾ ಉಡೇಪುರ ಜಿಲ್ಲೆಯ ಶಾಲೆ ತಲುಪಲು 20 ಕಿಮೀ ಹಿಡಿಯುತ್ತದೆ. ಹೀಗಾಗಿ ನದಿಗೆ ಸೇತುವೆ ಇಲ್ಲದಿರುವುದರಿಂದ ಮಕ್ಕಳು ಈಜಿ ದಡ ಸೇರುತ್ತಾರೆ. 

ಪೋಷಕರು ಮಕ್ಕಳು ನದಿಯಲ್ಲಿ ಈಜುವುದರ ಉಸ್ತುವಾರಿಯನ್ನು ಸರದಿಯಂತೆ ವಹಿಸುತ್ತಿದ್ದರು. ಗ್ರಾಮಸ್ಥರು ನದಿಗೆ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಆ ಕಡೆ ಗಮನಹರಿಸದೇ ಕಣ್ಣುಮುಚ್ಚಿಕೊಂಡು ಕುಳಿತಿದೆ. 

ವೆಬ್ದುನಿಯಾವನ್ನು ಓದಿ