ಶಾಲೆಯ ಶೌಚಾಲದಲ್ಲಿ ಮಗುವನ್ನು ಹೆತ್ತ 9ನೇ ತರಗತಿ ಬಾಲಕಿ

ಮಂಗಳವಾರ, 1 ಡಿಸೆಂಬರ್ 2015 (16:15 IST)
ಆಘಾತಕಾರಿ ಘಟನೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಬಾಲಕಿಯೊಬ್ಬಳು ಶಾಲೆಯ ಶೌಚಾಲಯದಲ್ಲಿ ಮಗುವನ್ನು ಹೆಚ್ಚ ಘಟನೆ ವರದಿಯಾಗಿದೆ.
 
ಬುಡಕಟ್ಟು ಸಮುದಾಯದ ಬಾಲಕಿಗೆ ಶಾಲೆಯ ತರಗತಿಯಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಗೆ ಏನಾಗುತ್ತಿದೆ ಎನ್ನುವ ಬಗ್ಗೆ ಅರಿವಿರಲಿಲ್ಲ. ತನಗೆ ಹೊಟ್ಟೆ ನೋವಾಗುತ್ತಿದೆ ಎಂದು ಮಾತ್ರ ಶಿಕ್ಷಕಿಗೆ ಮಾಹಿತಿ ನೀಡಿದ್ದಳು. ಶಿಕ್ಷಕಿ, ಬಾಲಕಿಗೆ ಶೌಚಾಲಯಕ್ಕೆ ಹೋಗುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
 
ಶಾಲೆಯ ಶೌಚಾಲಯದಲ್ಲಿ ಬಾಲಕಿ ಮಗುವಿಗೆ ಹೆತ್ತಿರುವುದು ನೋಡಿ ಆಘಾತಗೊಂಡ ಶಾಲಾ ಸಿಬ್ಬಂದಿ, ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಗೆ ತಾನು ಗರ್ಭವತಿಯಾಗಿದ್ದೇನೆ ಎನ್ನುವ ಯೋವುದೇ ಆಲೋಚನೆಯಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
 
ಬಾಲಕಿ ಮತ್ತು ಆಕೆಗೆ ಜನಿಸಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಮಾಧಾಪುರ್ ಸರಕಾರಿ ಶಾಲೆಯಲ್ಲಿರುವ 20 ಶಿಕ್ಷಕರಲ್ಲಿ 13 ಮಹಿಳೆ ಶಿಕ್ಷಕಿಯರಾಗಿದ್ದಾರೆ. ಆದರೆ ಯಾರೊಬ್ಬರಿಗೂ ಬಾಲಕಿ ಗರ್ಭವತಿಯಾಗಿದ್ದಾಳೆ ಎನ್ನುವ ಅನುಮಾನ ಬಂದಿರಲಿಲ್ಲ. ಬಾಲಕಿ ಶಾಲೆಯಲ್ಲಿರುವ ಬೆಂಚ್‌ನಲ್ಲಿ ಕುಳಿತಾಗ ತನ್ನ ಮುಂದೆ ಹೊಟ್ಟೆ ಕಾಣಿಸದಂತೆ ಬ್ಯಾಗ್ ಇಟ್ಟು ಕೊಳ್ಳುತ್ತಿದ್ದಳು ಎಂದು ಮಹಿಳಾ ಶಿಕ್ಷಕಿಯರು ಮಾಹಿತಿ ನೀಡಿದ್ದಾರೆ.
 
ಜಿಲ್ಲಾ ಶಿಕ್ಷಣ ಅಧಿಕಾರಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಶಾಲೆಯಲ್ಲಿನ ಸಿಬ್ಬಂದಿ ಬಾಲಕಿಯ ಸ್ಥಿತಿಗೆ ಕಾರಣರಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.
 
ಪ್ರಾಥಮಿಕ ತನಿಖೆ ಪ್ರಕಾರ, ಬಾಲಕಿಯೊಂದಿಗೆ ಶಾಲೆಗೆ ಆಗಮಿಸುತ್ತಿದ್ದ ದಿನೇಶ್ ಎನ್ನುವ ಯುವಕ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರಬಹುದು ಎಂದು ಪೊಲೀಸರು, ಆರೋಪಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ