8 ನೇ ತರಗತಿ ಬಾಲಕ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಬುಧವಾರ, 26 ನವೆಂಬರ್ 2014 (18:29 IST)
ವಿದ್ಯಾರ್ಥಿಗಳಲ್ಲಿ ಕೂಡ ಆತ್ಮಹತ್ಯೆ ಮನೋಭಾವ ಹೆಚ್ಚುತ್ತಿರುವುದಕ್ಕೆ ಫರೀದಾಬಾದ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಮೈಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಸಾಕ್ಷಿವೊದಗಿಸುತ್ತದೆ. ವಿದ್ಯಾರ್ಥಿ ಮೈಗೆ ಬೆಂಕಿ ಹಚ್ಚಿಕೊಂಡು ನೋಡುನೋಡುತ್ತಿದ್ದಂತೆ  ಮೈಯಲ್ಲಿ ಬೆಂಕಿ ಆವರಿಸಿಕೊಂಡಿತು. 

ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ನಂತರ ಅಲ್ಲಿಂದ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ಶೇ.40ರಷ್ಟು ಸುಟ್ಟ ಗಾಯಗಳಾದ ವಿದ್ಯಾರ್ಥಿ ಫರೀದಾಬಾದ್ ಹೋಲಿ ಚೈಲ್ಡ್ ಶಾಲೆಗೆ ಸೇರಿದವನು.

ಆರಂಭಿಕ ತನಿಖೆಯಲ್ಲಿ ವಿದ್ಯಾರ್ಥಿ ಶಾಲೆಯ ಚೀಲದಲ್ಲಿ ಸೀಸೆಯೊಂದರಲ್ಲಿ ಪೆಟ್ರೋಲ್ ತಂದಿದ್ದ. ಶಾಲೆಯ ಪ್ರಾರ್ಥನೆ ನಂತರ ಶೌಚಾಲಯಕ್ಕೆ ಹೋದ ವಿದ್ಯಾರ್ಥಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ. ವಿದ್ಯಾರ್ಥಿಯ ಅತಿರೇಕದ ವರ್ತನೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ. 

ವೆಬ್ದುನಿಯಾವನ್ನು ಓದಿ