ಮೊದಲು ಬಿಜೆಪಿಯನ್ನು ಶುದ್ಧಗೊಳಿಸಿ, ಬಳಿಕ ಸ್ವಚ್ಛ ಭಾರತ

ಬುಧವಾರ, 29 ಜೂನ್ 2016 (18:32 IST)
ಸ್ವಚ್ಛತಾ ಅಭಿಯಾನವನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿರುವ ಎನ್‌ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್ ಮೊದಲು ನಿಮ್ಮ ಪಕ್ಷದ ಮನೆಯನ್ನು ವ್ಯವಸ್ಥಿತವಾಗಿಸಿ ಎಂದಿದ್ದಾರೆ. 

ಸ್ವಚ್ಛ ಭಾರತ ಪ್ರಚಾರ ಮಾಡುವ ಮೊದಲು ಪ್ರಧಾನಿ ಅವರು ಬಿಜೆಪಿಯನ್ನು ಶುದ್ಧಗೊಳಿಸುವುದು ಸೂಕ್ತ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
 
ಮಹಾ ಸರ್ಕಾರದ ಕಂದಾಯ ಸಚಿವರಾದ ಏಕನಾಥ್ ಖಡ್ಸೆ ಭೃಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಕ್ಕೆ ಅವರು ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
 
ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತಕ್ಕೆ ಸಮಾಜದ ಯಾವ ವಿಭಾಗವೂ ತೃಪ್ತಿಯನ್ನು ವ್ಯಕ್ತ ಪಡಿಸಿಲ್ಲ ಎಂದು ಪಟೇಲ್ ವಾದಿಸಿದ್ದಾರೆ. 
 
ಬಿಜೆಪಿ ನಾಯಕರಾದ ಮಹಾ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ವಿದರ್ಭಕ್ಕೆ ಯಾವ ವಿಕಾಸವನ್ನು ತಂದಿಲ್ಲ ಎಂಬುದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ