ತ್ರಿವೇಣಿ ಸಂಗಮದಲ್ಲಿ ಮೂತ್ರ ಮಾಡಿ ಸಿಕ್ಕಿಬಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ

ಬುಧವಾರ, 24 ಫೆಬ್ರವರಿ 2016 (12:05 IST)
ಗಂಗಾನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ 'ನಮಾಮಿ ಗ೦ಗೆ' ಅಭಿಯಾನವನ್ನು ಆರಂಭಿಸಿದೆ. ಉತ್ತರ ಪ್ರದೇಶ ಸರ್ಕಾರ ಸಹ ಸ್ವಚ್ಛ ಭಾರತ ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನದಿಯನ್ನು ಸ್ವಚ್ಛವಾಗಿಡುವಂತೆ ದಡದಲ್ಲಿ ಪೋಸ್ಟರ್‌ಗಳನ್ನು ಸಹ ಹಾಕಿದೆ. ಹಾಗಿರುವಾಗ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೇ ಗಂಗಾನದಿಯಲ್ಲಿ ಮೂತ್ರ ವಿಜರ್ಸನೆ ಮಾಡಿದ್ದು ಸಾರ್ವಜನಿಕರಿಂದ ತೀವ್ರ ಖಂಡನೆಗೆ ಗುರಿಯಾಗಿದೆ. 
 
"ತ್ರಿವೇಣಿ ಮಹೋತ್ಸವ' ಆಚರಣೆ ಕುರಿತಂತೆ ಪರಿಶೀಲನೆ ನಡೆಸಲು ಬಂದಿದ್ದ ಅಲಹಾಬಾದ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಒ. ಪಿ. ಶ್ರೀವಾತ್ಸವ್ ಗ೦ಗಾ-ಯಮುನಾ-ಸರಸ್ವತಿ ನದಿಗಳ ಸ೦ಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದಲ್ಲಿಯೇ ಮೂತ್ರ ಮಾಡಿ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. 
 
ವಿಪರ್ಯಾಸವೆಂದರೆ ಅವರು ಆ ಸಂದರ್ಭದಲ್ಲಿ "ಕ್ಲೀನ್ ಗ೦ಗಾ' ಬರಹವಿದ್ದ ಟಿ ಶಟ್‍೯ ಧರಿಸಿದ್ದರು. ತಮ್ಮ ಕೃತ್ಯಕ್ಕೆ ಸ್ಪಷ್ಟನೆ ನೀಡಿರುವ ಅವರು ನನಗೆ ಮಧುಮೇಹ ಕಾಯಿಲೆಯಿದ್ದು, ಮೂತ್ರವನ್ನು ತಡೆಹಿಡಿಯಲಾಗದ್ದಕ್ಕೆ ಅಲ್ಲಿ ಮೂತ್ರ ಮಾಡಿದೆ ಎಂಬ ಅಸಂಬದ್ಧ ಕಾರಣವನ್ನು ನೀಡಿದ್ದಾರೆ. 
 
ಈ ಘಟನೆ ಇದೀಗ ಅಸಂಖ್ಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ