ಬಿಜೆಪಿಯ ಮೈತ್ರಿಯನ್ನು ತಿರಸ್ಕರಿಸಿದ ಸಿಎಂ ಓಮರ್ ಅಬ್ದುಲ್ಲಾ

ಸೋಮವಾರ, 22 ಡಿಸೆಂಬರ್ 2014 (18:14 IST)
ನಾಳೆ ಜಮ್ಮು ಕಾಶ್ಮೀರದ ವಿಧಾನಸಭಾ ಫಲಿತಾಂಶ ಹೊರ ಬೀಳಲಿದ್ದು, ಯಾವುದೇ ಕಾರಣಕ್ಕೂ  ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
 
ನಾಳೆ ಫಲಿತಾಂಶ ಹೊರ ಬೀಳಲಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಸಿಎಂ ಓಮರ್ ಅಬ್ದುಲ್ಲಾ, ಮತದಾನ ನಡೆಯುತ್ತಿದ್ದಾಗ ಪ್ರಧಾನಿ ಮೋದಿ ರ್ಯಾಲಿಗಳಲ್ಲಿ ಭಾಗವಹಿಸಿ ಕೇವಲ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ. ಇಲ್ಲಿ ಅಪ್ಪ, ಮಗಳ, ಅಪ್ಪ, ಮಗನ ರಾಜಕಾರಣದ ಆಡಳಿತ ನಡೆದಿದ್ದು, ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಅಭಿವೃದ್ಧಿಯನ್ನು ಬಯಸಿ ಬಂದಿದ್ದೇನೆ. ಅಲ್ಲದೆ ಸಿನಿಮೋದ್ಯಮವನ್ನು ಮತ್ತೆ ಕಣಿವೆ ರಾಜ್ಯಕ್ಕೆ ತರುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇನೆ ಎಂದೆಲ್ಲಾ ಹೇಳುವ ಮೂಲಕ ಮತದಾರರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಮತದಾರರಿಗೆ ಯಾರ ಮೇಲೆ ಒಲವಿದೆ ಎಂಬುದು ನಾಳೆಯ ಫಲಿತಾಂಶದಲ್ಲಿ ತಿಳಿಯಲಿದೆ ಎಂದು ಮೋದಿಗೆ ತಿರುಗೇಟು ನೀಡಿದ್ದಾರೆ. 
 
ಜಯ ನಮ್ಮದೇ ಆಗಲಿದ್ದು, ಬಿಜೆಪಿಯ ಅಗತ್ಯತೆ ಇರುವುದೇ ಇಲ್ಲ. ಒಂದು ವೇಳೆ ಹಾಗಾಗದಿದ್ದಲ್ಲಿ ನಾವು ಬಿಜೆಪಿಯ ಬೆಂಬಲವನ್ನೇ ಬಯಸುವುದಿಲ್ಲ. ಅಲ್ಲದೇ ಅವರೇ ಮೈತ್ರಿಗೆ ಮುಂದಾದರೂ ಕೂಡ ನಾವು ಅವರೊಂದಿಗೆ ಸಂಧಾನವೇ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ