ಸಿಎಂ ಅಖಿಲೇಶ್ ಯಾದವ್ ದುರ್ಯೋರ್ಧನ, ಶಿವಪಾಲ ಹನುಮಾನನಂತೆ!

ಗುರುವಾರ, 30 ಜೂನ್ 2016 (17:36 IST)
ತಮ್ಮ ಪಕ್ಷದ ಜತೆಗಿನ ವಿಲೀನವನ್ನು ಸಮಾಜವಾದಿ ಪಕ್ಷ ರದ್ದುಗೊಳಿಸಿರುವುದಕ್ಕೆ ಗರಂ ಆಗಿರುವ ಕ್ವಾಮಿ ಏಕ್ತಾ ದಳದ ಅಧ್ಯಕ್ಷ ಅಫ್ಜಲ್ ಅನ್ಸಾರಿ ಅಖಿಲೇಶ್ ಯಾದವ್ ಅವರು ದುರ್ಯೋಧನ, ಆದರೆ ಸಮಾಜವಾದಿ ರಾಜ್ಯ ಉಸ್ತುವಾರಿ ಮತ್ತು ಹಿರಿಯ ಸಚಿವ ಶಿವಪಾಲ್ ಸಿಂಗ್ ಯಾದವ್ ಹನುಮಾನ್‌ನಂತೆ ಎಂದಿದ್ದಾರೆ. 
 
ರೌಡಿ ಪರಿವರ್ತಿತ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಕ್ವಾಮಿ ಏಕ್ತಾ ದಳದೊಂದಿಗೆ ಪಕ್ಷ ತಮ್ಮ ಪಕ್ಷದೊಂದಿಗೆ ವಿಲೀನವಾಗುವುದಾಗಿ ಶಿವಪಾಲ್ ಘೋಷಿಸಿದ್ದರು. ಆದರೆ ಶನಿವಾರ ಸಮಾಜವಾದಿ ಕ್ಯಾಬಿನೇಟ್ ಬೋರ್ಡ್ ಇದನ್ನು ರದ್ದುಗೊಳಿಸಿತ್ತು. ಇದು ಮಾಜಿ ಭೂಗತ ದೊರೆಯನ್ನು ಕೆರಳಿಸಿದೆ,  
 
ಅಖಿಲೇಶ್ ಯಾದವ್ "ದುರಹಂಕಾರಿ ಮುಖ್ಯಮಂತ್ರಿ" ಎಂದ ಅವರು, ಅವರ ತಂದೆ ಮುಲಾಯಂ ಸಿಂಗ್ ಯಾದವ್ ಸಹ ಈ ವಿಲೀನಕ್ಕೆ ಬೆಂಬಲವಾಗಿದ್ದರು, ಆದರೆ ಶುದ್ಧ ಹಸ್ತ ಎಂಬುದಾಗಿ ಸ್ವತಃ ಘೋಷಿಸಿಕೊಂಡಿರುವ ಬ್ರ್ಯಾಂಡಿಂಗ್‌ಗಾಗಿ ಅಖಿಲೇಶ್ ವಿಲೀನವನ್ನು ವಿರೋಧಿಸಿದ್ದಾರೆ ಎಂದಿದ್ದಾರೆ. 
 
ಮಹಾಭಾರತವನ್ನು ಉಲ್ಲೇಖಿಸಿದ ಅವರು, ಅಖಿಲೇಶ್ ಯಾದವ್ ಅವರನ್ನು ದುರ್ಯೋಧನನಿಗೆ ಹೋಲಿಸಿದರು. ಮುಲಾಯಂ ವೃದ್ಧರಾಗಿರುವುದರಿಂದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮಗ ಅಖಿಲೇಶ್ ಅವರನ್ನು ಡೊಮಿನೇಟ್ ಮಾಡುತ್ತಿದ್ದಾರೆ. ಶಿವಪಾಲ್ ಹನುಮಾನ್ ಅವರಿದ್ದಂತೆ. ನಿಜವಾದ ರಾಮ ಭಕ್ತನಂತೆ ತಮ್ಮ ಸಹೋದರ ಮುಲಾಯಂ ಅವರನ್ನು ಅನುಸರಿಸುತ್ತಾರೆ. ಈ  ಬೆಳವಣಿಗೆಯಿಂದ ಮುಲಾಯಂ ಮತ್ತು ಅವರ ಸಹೋದರ ಇಬ್ಬರೂ ಬೇಸರಗೊಂಡಿದ್ದಾರೆ. ತಮ್ಮ ಚಿಕ್ಕಪ್ಪನನ್ನು ಸಿಎಂ ಸೈಡ್‌ಲೈನ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ