ಸಂಪುಟ ಪುನಾರಚನೆ ಸಮರ್ಥಿಸಿಕೊಂಡ ಸಿಎಂ

ಭಾನುವಾರ, 10 ಜುಲೈ 2016 (14:14 IST)
ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯಕ್ಕೆ ಕಾರಣವಾದ ಸಂಪುಟ ಪುನಾರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. 
 
ದಿನೇಶ್ ಗುಂಡೂರಾವ್ ಪದಗ್ರಹಣ ಸಮಾರಂಭದಲ್ಲಿ ಮಾತನ್ನಾಡುತ್ತಿದ್ದ ಅವರು, ಪುನಾರಚನೆ ಅನಿವಾರ್ಯತೆಯನ್ನು ನಾನು ಎಲ್ಲ ಸಚಿವರಿಗೆ ವಿವರಿಸಿದ್ದೆ. ಕೆಲವರು ಒಳಗೆ ಬಂದಾಗ ಕೆಲವರು ಹೊರ ಹೋಗಲೇಬೇಕು. ಅದಕ್ಷತೆ ಕಾರಣಕ್ಕೆ ಯಾರನ್ನೂ ಸಂಪುಟದಿಂದ ಕೈ ಬಿಟ್ಟಿಲ್ಲ. ಹೈಕಮಾಂಡ್ ನಿರ್ಧಾರದ ಮೇಲೆ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. 
 
ಸಾಮಾನ್ಯವಾಗಿ ಮಂತ್ರಿಯಾದ ಮೇಲೇ ಯಾರೂ ಸ್ಥಾನ ಬಿಡಲು ಒಪ್ಪಲ್ಲ. ಸಂಪುಟ ಪುನಾರಚನೆಯಿಂದ ಕೆಲವರಿಗೆ ಅಸಮಾಧಾನವಾಗಿದೆ. ಕೆಲವರು ಈ ಬಗ್ಗೆ ಬಹಿರಂಗವಾಗಿ  ತೃಪ್ತಿಯನ್ನು ತೋಡಿಕೊಂಡಿದ್ದಾರೆ. ಆದ್ರೆ ದಿನೇಶ್ ಗುಂಡುರಾವ್ ಮಾತ್ರ ಈ ಬಗ್ಗೆ ಮಾತನ್ನಾಡಿಲ್ಲ. ಹೀಗಾಗಿ ಅವರನ್ನು ನಿಷ್ಠಾವಂತ ಕಾರ್ಯಕರ್ತರೆನ್ನಬಹುದು. ಪುನಾರಚನೆ ಮುನ್ನ ಮಂತ್ರಿ ಪರಿಷತ್ ಸಭೆ ನಡೆಸಲು ಸಲಹೆ ನೀಡಿದ್ದೇ ಅವರು. ಆಹಾರ ಸಚಿವರಾಗಿದ್ದಾಗ ದಿನೇಶ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಸಿಎಂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಗುಂಡೂರಾವ್ ಅವರನ್ನು ಸಿಎಂ ಶ್ಲಾಘಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ