ಸಿಎಂ ಕೇಜ್ರಿವಾಲ್ ‘ಯೂನಿವರ್ಸಲ್ ಫ್ರಾಡ್’ ಎಂದ ಸುಬ್ರಮಣಿಯನ್ ಸ್ವಾಮಿ

ಶುಕ್ರವಾರ, 14 ಏಪ್ರಿಲ್ 2017 (08:35 IST)
ನವದೆಹಲಿ: ದೆಹಲಿ ಉಪ ಚುನಾವಣೆ ಗೆಲುವಿನ ಖುಷಿಯಲ್ಲಿರುವ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ‘ಯೂನಿವರ್ಸಲ್ ಫ್ರಾಡ್’ ಎಂದು ಟೀಕಿಸಿದ್ದಾರೆ.

 

ಜನರಿಗೆ ಈಗ ಆಮ್ ಆದ್ಮಿ ಪಕ್ಷದ ನಿಜ ಬಣ್ಣ ಗೊತ್ತಾಗಿದೆ. ಅದಕ್ಕೇ ಉಪಚುನಾವಣೆಯಲ್ಲಿ ಹೀನಾಯ ಸೋಲಿನ ರುಚಿ ತೋರಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿಕೊಂಡಿದ್ದಾರೆ.

 
‘ಜನ ಏನೋ ನಿರೀಕ್ಷೆ ಇಟ್ಟುಕೊಂಡು ಅವರಿಗೆ ಮತ ಹಾಕಿದ್ದರು. ಅದೆಲ್ಲಾ ಸುಳ್ಳು ಎಂದು ಅವರಿಗೀಗ ಗೊತ್ತಾಗಿದೆ. ನೋಡ್ತಾ ಇರಿ, ಮುಂದೆ ಎಲ್ಲಾ ಚುನಾವಣೆಗಳಲ್ಲೂ ಎಎಪಿ ಸೋತು ಮಣ್ಣು ಮುಕ್ಕಲಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ರಾಜ್ ಗೌರ್ ಕ್ಷೇತ್ರದ ಉಪಚುನಾವಣೆಯಲ್ಲಿ ಎಎಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದೇ ವೇಳೆ ಮತಯಂತ್ರಗಳನ್ನು ನಿಷೇಧಿಸಬೇಕೆಂದು ರಾಷ್ಟ್ರಪತಿಯವರೆಗೆ ದೂರು ಕೊಂಡೊಯ್ದೆ ಎಎಪಿ ನಾಯಕರನ್ನೂ ಟೀಕಿಸಲು ಅವರು ಮರೆಯಲಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ