ಉತ್ತರ ಪ್ರದೇಶ ಸ್ವಚ್ಛವಿಲ್ಲ ಎಂದಿದ್ದಕ್ಕೆ ಪೊರಕೆ ಕೈಗೆ ತೆಗೆದುಕೊಂಡ ಸಿಎಂ ಯೋಗಿ!

ಶನಿವಾರ, 6 ಮೇ 2017 (13:44 IST)
ಲಕ್ನೋ: ಸ್ವಚ್ಛ ಭಾರತ ಸರ್ವೇಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡ ಮೇಲೆ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ಸ್ವತಃ ಸಿಎಂ ಯೋಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.

 
ಇಂದು ಬೆಳಿಗ್ಗೆಯೇ ಕಸಬರಿಕೆ ಹಿಡಿದುಕೊಂಡು ತಮ್ಮ ಸಂಗಡಿಗರೊಂದಿಗೆ ಲಕ್ನೋದ ಬೀದಿಗಳಲ್ಲಿ ಕಸ ಗುಡಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಿದರು.

ಅಲ್ಲದೆ ಉತ್ತರ ಪ್ರದೇಶವನ್ನು ಶುಚಿಯಾಗಿಡಲು ಕೈ ಜೋಡಿಸುವಂತೆ ಜನತೆಗೆ ಮನವಿ ಮಾಡಿದರು. ಇಂದಿಡೀ ಸ್ವಚ್ಛತಾ ಕಾರ್ಯದಲ್ಲಿ ತೊಡಗಲು ಹೆಚ್ಚಿನ ಅಧಿಕಾರಿಗಳಿಗೆ ದೈನಂದಿನ ಕೆಲಸಗಳಿಗೆ ಬಿಡುವು ನೀಡಿರುವ ಸಿಎಂ ಶುಚಿಗೊಳಿಸಲು ಸೂಚಿಸಿದ್ದಾರೆ.

ಸ್ವತಃ ಸಿಎಂ ಸ್ವಚ್ಛತಾ ಕಾರ್ಯ ಮಾಡುವುದು ನೋಡಿ ಅವರ ಜತೆಗಿದ್ದ ಜನಪ್ರತಿನಿಧಿಗಳು, ಸಾರ್ವಜನಿಕರು ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ