ಇಂದಿರಾ ಕುರಿತು ಪ್ರಣವ್ ಪುಸ್ತಕ..

ಬುಧವಾರ, 26 ನವೆಂಬರ್ 2014 (09:27 IST)
ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ಬರೆದಿರುವ ಇನ್ನೊಂದು ಪುಸ್ತಕ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತುದಾಗಿದೆ.

ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಅವರ ಜೀವನ, ಆಡಳಿತ ವೈಖರಿಯನ್ನೊಳಗೊಂಡಂತೆ 1970ರ ದಶಕದ ರಾಜಕೀಯ ಪರಿಸ್ಥಿತಿಯನ್ನು ವಿವರಿಸುವ ಪುಸ್ತಕ ಇದಾಗಿದೆ ಎಂದು ಪ್ರಕಾಶಕಿ ರೂಪಾ ತಿಳಿಸಿದ್ದಾರೆ.
 
ಈವರೆಗೆ ಪ್ರಣಬ್​ ಮುಖರ್ಜಿ ಅವರು ಬರೆದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಈಗವರು ಬರೆದ ಪುಸ್ತಕದ ಹೆಸರು ‘ದಿ ಡೆಮೋಕ್ರೆಟಿಕ್​ ಡಿಕೇಡ್​ - ದಿ ಇಂದಿರಾ ಗಾಂಧಿ ಇಯರ್ಸ್’. ರಾಷ್ಟ್ರಪತಿಗಳ ಈ ಪುಸ್ತಕ ಬಿಡುಗಡೆಯ ಮುನ್ನವೇ ಸಾಕಷ್ಟು ಕುತೂಹಲಗಳನ್ನು ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ