ಕಾಮನ್‌ವೆಲ್ತ್ ಕುಸ್ತಿಯಲ್ಲಿ ಭಾರತದ್ದೆ ಪ್ರಾಬಲ್ಯ: ಸುಶೀಲ್‌, ವಿನೇಶಾ, ಅಮಿತ್‌‌ಗೆ ಚಿನ್ನ

ಬುಧವಾರ, 30 ಜುಲೈ 2014 (13:17 IST)
ಭಾರತದ ಮೂವರು ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ.
 
ಅಮಿತ್‌ ಕುಮಾರ್‌ 57 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಚಿನ್ನ ಗೆದ್ದರೆ, ಮಹಿಳಾ ವಿಭಾಗದ 48 ಕೆ.ಜಿ. ಫ್ರೀಸ್ಟೈಲ್‌ ಪೈಪೋಟಿಯಲ್ಲಿ ವಿನೇಶಾ ಫೋಗಟ್‌ ಸ್ವರ್ಣ ಪದಕ ಗಳಿಸಿದರು. ಸುಶೀಲ್‌ ಕುಮಾರ್ 74 ಕೆ.ಜಿ  ಫ್ರೀಸ್ಟೈಲ್‌ ಪೈಪೋಟಿಯಲ್ಲಿ ಚಿನ್ನದ ನಗೆ ಬೀರಿದ್ದಾರೆ.
 
ಶೂಟಿಂಗ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿಯಿತು. 50ಮೀ. ರೈಫಲ್‌ 3ಪೊಸಿಷನ್‌ ಸ್ಪರ್ಧೆಯಲ್ಲಿ ಗಗನ್‌ ನಾರಂಗ್‌ ಚಿನ್ನವನ್ನು ಉಳಿಸಿಕೊಳ್ಳಲಿಲ್ಲವಾದರೂ ಕಂಚಿಗೆ ತೃಪ್ತಿ ಪಟ್ಟರು. ಆದರೆ ಸಂಜೀವ್‌ ರಜಪೂತ್‌ ರಜತ ಪದಕ ಗಳಿಸಿದರು.
 
25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲು ಸ್ಪರ್ಧೆಯಲ್ಲಿ ಹರ್‌ಪ್ರೀತ್‌ ಬೆಳ್ಳಿ ಗೆದ್ದರೆ, ಟ್ರ್ಯಾಪ್‌ಸ್ಪರ್ಧೆ­ಯಲ್ಲಿ ಮಾನವ್‌ಜಿತ್‌ ಸಿಂಗ್‌ ಕಂಚು ಗೆದ್ದರು. ಆದರೆ ಹಾಕಿಯಲ್ಲಿ ಪ್ರಬಲ ಆಸ್ಟ್ರೇಲಿಯಾದ ಎದುರು ಭಾರತ 2–4
ರಿಂದ ಸೋಲನುಭವಿಸಿತು.

ವೆಬ್ದುನಿಯಾವನ್ನು ಓದಿ