ಬಾಬಾ ರಾಮದೇವ್‌ಗೆ ಪ್ರತಿಸ್ಪರ್ಧಿ: ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಡೇರಾ ಸಚಾ ಸೌದಾ ಮುಖ್ಯಸ್ಥ

ಸೋಮವಾರ, 1 ಫೆಬ್ರವರಿ 2016 (16:53 IST)
ಯೋಗಾ ಗುರು ಬಾಬಾ ರಾಮದೇವ್ ಅವರ ದಾರಿ ತುಳಿದಿರುವ ಡೇರಾ ಸಚಾ ಸೌದಾ ಮುಖ್ಯಸ್ಥ ಗುರುಮಿತ್ ರಾಮ್ ರಹೀಮ್, ಸ್ವದೇಶಿ ಮತ್ತು ಆರ್ಗನಿಕ್ ಉತ್ಪಾದನೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.
 
ಬಾಬಾ ರಾಮದೇವ್ ಅವರನ್ನು ಮಾದರಿಯಾಗಿರಿಸಿಕೊಂಡ ಸಿರ್ಸಾ ಮೂಲದ ಡೇರಾ ಸಚಾ ಸೌದಾ ಮುಖ್ಯಸ್ಥ ಬಾಬಾ ಗುರುಮಿತ್ ರಾಮ್ ರಹೀಮ್, ಎಂಎಸ್‌ಜಿ ರೇಂಜಿನ ಆಹಾರ ಉತ್ಪಾದನೆಯಲ್ಲಿ ತೊಡಗಿದ್ದಾರೆ.
 
ಎಂಎಸ್‌ಜಿ ಕಟ್ಟಡದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಹೀಮ್, 151 ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸ್ವದೇಶಿಯ ಮತ್ತು ಆರೋಗ್ಯಕರವಾದ ಆಹಾರ ದೊರೆಯಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. 
 
ಆಹಾರ ಉತ್ಪನ್ನಗಳ ಬಗ್ಗೆ ದೂರುಗಳು ಬಂದಲ್ಲಿ ಎಂಎಸ್‌ಜಿ ಬ್ರ್ಯಾಂಡ್ ರಾಯಭಾರಿಯಾದ ನಾನು ಹುದ್ದೆಯಿಂದ ಕೆಳಗಿಳಿಯಿವುದಾಗಿ ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಡೇರಾ ಸಚಾ ಸೌದಾ ಮುಖ್ಯಸ್ಥ ಬಾಬಾ ಗುರುಮಿತ್ ರಾಮ್ ರಹೀಮ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ