ಬಿಜೆಪಿಯ ಮೇಲಿನ ಮುಸ್ಲಿಂರ ನಂಬಿಕೆ ಹೆಚ್ಚಿದೆ: ನಜ್ಮಾ ಹೆಫ್ತುಲ್ಲಾ

ಸೋಮವಾರ, 21 ಜುಲೈ 2014 (17:29 IST)
ಬಿಜೆಪಿಯ  "ಎಲ್ಲರಿಗಾಗಿ ಅಭಿವೃದ್ಧಿ" ಅಜೆಂಡಾದ ಪರಿಣಾಮ  ಕೇಸರಿ ಪಕ್ಷದ ಮೇಲೆ ಮುಸ್ಲಿಂ ಸಮುದಾಯದವರ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರ ಮಂತ್ರಿ ನಜ್ಮಾ ಹೆಪ್ತುಲ್ಲಾ ಮತಬ್ಯಾಂಕ್ ರಾಜಕಾರಣದ ಸಿಂಡ್ರೋಮ್  ಈಗ ಹಳೆಯ ಸಂಗತಿಯಾಗಿದೆ ಎಂಬ ಆಶಾವಾದವನ್ನು ವ್ಯಕ್ತ ಪಡಿಸಿದ್ದಾರೆ. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ಮುಸ್ಲಿಂಮರು ಬಿಜೆಪಿಗೆ ಮತ ನೀಡಿದ್ದಾರೆ.  ಬಿಜೆಪಿಗೆ ಮತ ನೀಡುವ ವಿಷಯದಲ್ಲಿ ಅವರು ನಿಧಾನವಾಗಿ ಮುಂದಕ್ಕೆ ಬರುತ್ತಿದ್ದಾರೆ. ಏಕೆಂದರೆ ಭಾರತದ  ಇತಿಹಾಸದಲ್ಲಿ ಪ್ರಥಮ ಬಾರಿಗೆ  ನಾಯಕನೊಬ್ಬ ಚುನಾವಣಾ ಘೋಷವಾಗಿ ಅಭಿವೃದ್ಧಿಗೆ ಒತ್ತು ನೀಡಿದ. ಅಲ್ಪ ಸಂಖ್ಯಾತರು, ಬಹುಸಂಖ್ಯಾತರು ಸೇರಿದಂತೆ  ಇಡೀ ದೇಶದವರನ್ನೊಳಗೊಂಡ ವಿಕಾಶದ ಬಗ್ಗೆ ಅವರು ಮಾತನಾಡಿದರು. ಅದರಲ್ಲಿ ಮುಸ್ಲಿಂರು ಬರುತ್ತಾರೆ ಎಂದು ಅವರು ಹೇಳಿದ್ದಾರೆ. 
 
ಮೋದಿಯವರು  ಪ್ರತಿಯೊಬ್ಬರ ಬಗ್ಗೆ ಮಾತನಾಡಿದರು.  ಅವರು ವಿಕಾಶದ ಬಗ್ಗೆ ಮಾತನಾಡಿದಾಗ ಅಲ್ಪಸಂಖ್ಯಾತರು, ನಿರ್ದಿಷ್ಟವಾಗಿ ಮುಸ್ಲಿಂಮರು  ಅವರಿಗೆ ಮತ ನೀಡಿದರು. 100 ಪ್ರತಿಶತ  ಮುಸ್ಲಿಂರು  ಮತ ನೀಡಿಲ್ಲ. ಆದರೆ ಅವರು ಮತ ನೀಡಿದ್ದಾರೆ ಎಂಬುದು ನಿಜ. ಬಿಜೆಪಿ ಮೇಲಿನ ನಂಬಿಕೆ ಹೆಚ್ಚಿದಂತೆ  ಮತ ನೀಡುವುದರಲ್ಲಿಯೂ ಏರಿಕೆಯಾಗುತ್ತದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವೆ ಹೇಳಿದ್ದಾರೆ. 
 
ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆ ಪರಿಗಣನೆ, ಇಲ್ಲದೇ ಜನರು ಮೋದಿಯವರಿಗೆ ಮತ ಚಲಾಯಿಸಿದ್ದಾರೆ ಎಂದಿರುವ ರಾಜ್ಯಸಭೆಯ ಮಾಜಿ ಉಪಾಧ್ಯಕ್ಷೆ   ಭವಿಷ್ಯದಲ್ಲಿ  "ಮತ ಬ್ಯಾಂಕ್ ರಾಜಕಾರಣದ ಪರಿಕಲ್ಪನೆ ಇರುವುದಿಲ್ಲ  "ಎಂಬ ಭರವಸೆ ಹೊಂದಿದ್ದಾರೆ. 

ವೆಬ್ದುನಿಯಾವನ್ನು ಓದಿ