ಕಾಶ್ಮೀರ್ ಕುರಿತು ಹೇಳಿಕೆ ನೀಡುವಾಗ ಎಚ್ಚರವಿರಲಿ: ಬಿಜೆಪಿಗೆ ಕಾಂಗ್ರೆಸ್ ಸೂಚನೆ

ಶನಿವಾರ, 23 ಆಗಸ್ಟ್ 2014 (11:49 IST)
ಕಾಶ್ಮೀರದ ಬಗ್ಗೆ ಅಸಂವೇದನಾಶೀಲ ಹೇಳಿಕೆ ನೀಡಿದ ಆಡಳಿತಾರೂಢ ಬಿಜೆಪಿಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್  ಐತಿಹಾಸಿಕ ಸಮಸ್ಯೆ ಬಗ್ಗೆ ಬಹಿರಂಗವಾಗಿ ಮಾತನಾಡುವಾಗ ಬಿಜೆಪಿ ಎಚ್ಚರ ವಹಿಸಬೇಕು ಎಂದು  ಸೂಚಿಸಿದೆ. 

ಜಮ್ಮು ಕಾಶ್ಮೀರದ ಸರಕಾರ ಬಗ್ಗೆ ಈ ರೀತಿಯ ಹೇಳಿಕೆಗಳನ್ನು  ನೀಡುವುದು ತೀವೃ ಅಸಂವೇದನಾಶೀಲವಾಗಿದೆ. ಕಣಿವೆ ನಾಡಿನಲ್ಲಿ  ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಬಿಟ್ಟು ಇನ್ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಸೂಚಿಸುವಂತಿದೆ ಅವರ ಮಾತುಗಳು. ಆದರೆ ಇದು ಸತ್ಯವಲ್ಲ. ಇದು ಒಂದು ಅತ್ಯಂತ ಸಂಕೀರ್ಣ, ದೀರ್ಘಕಾಲದ, ಐತಿಹಾಸಿಕ ಸಮಸ್ಯೆ ಎಂದು "ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
 
ಕಾಶ್ಮೀರ್‌ದಲ್ಲಿ ಹಿಂದು ಮುಖ್ಯಮಂತ್ರಿ  ಕುರಿತ ಮಾತುಗಳು ಕೇಳಿ ಬರುತ್ತಿರುವ ಪ್ರಶ್ನೆಗೆ ಉತ್ತರಿಸಿದ ಖುರ್ಶಿದ್  ಇದೇ ತೆರನಾಗಿ  ಬೇರೇ ರಾಜ್ಯಗಳ ಬಗ್ಗೆಯೂ ನಾವು ಹೇಳುತ್ತೇವೆಯೇ? ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾತ್ರ ಏಕೆ ಹೀಗೆ?  ತಮಗೆ ಬೇಕಾದ ಜನಪ್ರತಿನಿಧಿಯನ್ನು ರಾಜ್ಯದ ಜನರೇ ಆಯ್ಕೆ ಮಾಡಿಕೊಳ್ಳಲಿ  ಎಂದರು. 

ವೆಬ್ದುನಿಯಾವನ್ನು ಓದಿ