ಕೇದಾರನಾಥ್ ಭೇಟಿ: ಹಿಂದೂಗಳ ಓಲೈಕೆಯತ್ತ ಕಾಂಗ್ರೆಸ್ ಪಕ್ಷದ ಚಿತ್ತ

ಶನಿವಾರ, 25 ಏಪ್ರಿಲ್ 2015 (14:39 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿ ಹಿಂದೂಗಳ ಓಲೈಕೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಪರ ಎನ್ನುವ ಇಮೇಜ್ ಬದಲಾವಣೆಗೆ ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಪವಿತ್ರ ಹಿಂದೂ ಸ್ಥಳವಾದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದರಿಂದ, ರಾಹುಲ್ ಗಾಂಧಿ ಇದೀಗ ಕೇದಾರನಾಥ್ ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಘರಾವಾಲ್ ಹಿಮಾಲಯ ತಪ್ಪಲಲ್ಲಿರುವ ಕೇದಾರನಾಥ್ ದೇವಾಲಯವನ್ನು ತಲುಪಲು 23 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿರುವ ಕುರಿತಂತೆ ಹೇಳಿಕೆ ನೀಡಿರುವ ಎಐಸಿಸಿ ವಕ್ತಾರ ಆರ್‌.ಪಿ.ಎನ್ ಸಿಂಗ್, ದೇವರ ಆಶೀರ್ವಾದ ಪಡೆಯುವುದು ಒಳ್ಳೆಯ ಸಂಗತಿ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಕೇದಾರನಾಥ್ ಭೇಟಿ ಹಿಂದೂಗಳ ಓಲೈಕೆಯ ಪ್ರಯತ್ನವೇ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್ , ರಾಹುಲ್ ಕೇದಾರನಾಥ್ ಮಾತ್ರವಲ್ಲ ಈ ಹಿಂದೆ, ಗೌತಮ್ ಬುದ್ಧ, ಕಬೀರ್‌ ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ರಾಹುಲ್ ಭೇಟಿಯಿಂದ ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಂಪೂರ್ಣ ಸುರಕ್ಷತೆಯ ಅನುಭವವಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಪರವಾಗಿದೆ ಎನ್ನುವ ಇಮೇಜ್‌ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ