ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಸ್ಥಿರಗೊಳಿಸುವುದೇ ಪ್ರಮುಖ ಕಾಯಕ: ವೆಂಕಯ್ಯ ನಾಯ್ಡು

ಶುಕ್ರವಾರ, 31 ಜುಲೈ 2015 (19:20 IST)
ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವನ್ನು ಅಸ್ಥವ್ಯಸ್ಥಗೊಳಿಸುವಲ್ಲಿ ನಿರತವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು  ಆರೋಪಿಸಿದ್ದಾರೆ.
 
ಸಂಸತ್ತಿನ ಕಲಾಪ ಸುಗಮವಾಗಿ ಸಾಗಲು ಅನುವಾಗುವಂತೆ ವಿಪಕ್ಷಗಳೊಂದಿಗೆ ಸಹಕರಿಸಲು ಕೇಂದ್ರ ಸರಕಾರ ಸಿದ್ದವಿದೆ. ಆದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಂಸತ್ತಿನ ಕಲಾಪ ಅಸ್ಥವ್ಯಸ್ಥಗೊಳಿಸುತ್ತಿವೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತೆಯಿಲ್ಲ. ಅಧಿವೇಶನದಲ್ಲಿ ಮಹತ್ವವಾದ ಮಸೂದೆಗಳಿಗೆ ಅಂಗೀಕಾರ ಹಾಕಿ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಅವಕಾಶಗಳಿವೆ. ಆದರೆ ವಿಪಕ್ಷಗಳು ಸಹಕರಿಸುತ್ತಿಲ್ಲ ಎಂದು ಕಿಡಿಕಾರಿದರು. 
 
ವಿಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲು ನಾವು ಸಿದ್ದರಿದ್ದೇವೆ. ಆದ್ದರಿಂದಲೇ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ರಾಜ್ಯಸಭೆಯಲ್ಲೂ ಕೂಡಾ ನಕ್ವಿ ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್ ಕೇವಲ ಮುಂದೂಡುತ್ತಿದೆ ಎಂದು ಆರೋಪಿಸಿದರು. 
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರ ಸಿದ್ದವಿದೆ. ಆದರೆ, ವಿಪಕ್ಷಗಳು ಚರ್ಚೆಗೆ ಸಿದ್ದವಿಲ್ಲ ಎಂದು ವೆಂಕಯ್ಯ ನಾಯ್ಡು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ