ಬಿಜೆಪಿ ಅಂಜುಬುರುಕ, ಹೇಡಿ ಪಕ್ಷ ಎಂದ ಕಾಂಗ್ರೆಸ್

ಸೋಮವಾರ, 3 ಆಗಸ್ಟ್ 2015 (15:50 IST)
ಭಯೋತ್ಪಾದನೆ ಮತ್ತು ಕದನ ವಿರಾಮ ಉಲ್ಲಂಘನೆ ಪ್ರಶ್ನೆ ಮುಂದೆ ನಿಂತಾಗ ಬಿಜೆಪಿ ಸದಾ ಹೇಡಿತನ ಮತ್ತು ಅಂಜುಬುರುಕುತನವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಟೀಕಿಸಿದ್ದಾರೆ. 

"ಒಂದು ತಲೆ ಕತ್ತರಿಸಿದರೆ, ನಾವು 10 ತಲೆಗಳನ್ನು ಕತ್ತರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸದಾ ಗರ್ವದಿಂದ ಹೇಳಿಕೊಳ್ಳುತ್ತಿದ್ದರು. ಅವರು ಹೇಳಿದ್ದ ಮಾತುಗಳೆಲ್ಲ ಈಗೇನಾದವು?  56 ಇಂಚಿನ ಎದೆ ಏನಾಯಿತು? ನಾನು ಪ್ರಧಾನಿಯಾದಾಗ ಭಾರತಕ್ಕೆ ಯಾವ ಅಪಾಯವೂ ಬರಲಾರದು ಎಂದು ಅವರು ಧೈರ್ಯದಿಂದ ಘೋಷಿಸಿದ್ದರು. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ  1,114 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಆದರೆ ನಮ್ಮ ಧೈರ್ಯಶಾಲಿ ಪ್ರಧಾನಿ ಪಾಕ್ ಕಳುಹಿಸಿದ ಮಾವಿನ ಹಣ್ಣು ಮತ್ತು ಸೀರೆಗಳನ್ನು ಸ್ವೀಕರಿಸುತ್ತ ನವದೆಹಲಿಯಲ್ಲಿ ಮೌನವಾಗಿ ಕುಳಿತಿದ್ದಾರೆ", ಎಂದು ತಿವಾರಿ ಮೋದಿಯವರಿಗೆ ಮಾತಿನಿಂದ ತಿವಿದಿದ್ದಾರೆ. 
 
'ಉಗ್ರ ಕೃತ್ಯ ಮತ್ತು ಗಡಿ ತಂಟೆ ಎದುರಾದಾಗ ಬಿಜೆಪಿ ಪುಕ್ಕಲುತನವನ್ನು ಪ್ರದರ್ಶಿಸಿ',ದೆ ಎಂದು ಹೇಳಲು ಬಯಸುತ್ತೇವೆ ಎಂದ ತಿವಾರಿ, 'ಬಿಜೆಪಿ ಗೌರವಾನ್ವಿತ ಇಂದಿರಾ ಗಾಂಧಿ ತೋರಿಸಿದ ನಡೆಯನ್ನು ಅನುಸರಿಸಬೇಕು ಮತ್ತು ಧೈರ್ಯ. ತಾಳ್ಮೆಯನ್ನು ತೋರಿಸಬೇಕು', ಎಂದು ಸಲಹೆ ನೀಡಿದ್ದಾರೆ. 
 
ರವಿವಾರ ರಾತ್ರಿ ಪುನಃ ಪಾಕ್ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಗಡಿ ಪೂಂಚ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. 24 ಗಂಟೆಗಳಲ್ಲಿ ಅವರು ನಡೆಯಿದ ಎರಡನೇ  ಕದನ ವಿರಾಮ ಉಲ್ಲಂಘನೆ ಇದಾಗಿದೆ. 

ವೆಬ್ದುನಿಯಾವನ್ನು ಓದಿ