ಅರುಣಾಚಲದಲ್ಲಿ ಹೊಸ ಸರ್ಕಾರವನ್ನು ರಚಿಸುತ್ತೇವೆ: ಕಾಂಗ್ರೆಸ್

ಮಂಗಳವಾರ, 16 ಫೆಬ್ರವರಿ 2016 (18:14 IST)
ರಾಜ್ಯದಲ್ಲಿರುವ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳಬೇಕೆಂಬ ರಾಜ್ಯಪಾಲರ ಶಿಫಾರಸ್ಸು ನಮ್ಮ ಅರಿವಿಗೆ ಬಂದಿದೆ  ತಾವು ಹೊಸ ಸರ್ಕಾರವನ್ನು ರಚಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದಾರೆ.
 
ಮಾಜಿ ಮುಖ್ಯಮಂತ್ರಿ ನಬಮ್ ತುಕಿ ಮತ್ತು ಮಾಜಿ ಸ್ಪೀಕರ್ ಲಬಮ್ ರೆಬಿಯಾ ಅವರನ್ನು  ಪ್ರತಿನಿಧಿಸಿದ್ದ ವಕೀಲರಾದ ಫಾಲಿ.ಎಸ್ ನಾರಿಮನ್ ಮತ್ತು ಕಪಿಲ್ ಸಿಬಲ್ ರಾಜ್ಯದಲ್ಲಿ ಹೊಸ ಸರ್ಕಾರ ಶಪಥ ಗ್ರಹಣ ಮಾಡುವ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. 
 
ಕೇಂದ್ರ ಮತ್ತು ರಾಜ್ಯಪಾಲರು ಸರಕಾರ ರಚನೆಗೆ ಅಡ್ಡಿಯಾಗುವ ಗುಮಾನಿಯಿರುವುದರಿಂದ ಸರಕಾರ ರಚನೆಗೆ ಸಂಬಂಧಿಸಿದಂತೆ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನಾರಿಮನ್,  ಜೆ.ಎಸ್. ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಹೇಳಿದ್ದಾರೆ. 
 
 ಶಾಸಕರನ್ನು ಅನರ್ಹಗೊಳಿಸುವ ವಿಧಾನಸಭಾ ಸ್ಪೀಕರ್ ಅಧಿಕಾರವನ್ನು ನೀವು ಚಲಾಯಿಸಿದ್ದು ಹೇಗೆ ಎಂದು ಸುಪ್ರೀಂಕೋರ್ಟ್, ರಾಜ್ಯಪಾಲ ಜೆ.ಪಿ.ರಾಜ್‌ಖೋವಾ ಅವರಿಗೆ ಮಂಗಳವಾರ ಪ್ರಶ್ನಿಸಿದೆ. 
 
ಸಂವಿಧಾನದ ಹತ್ತನೇ ಪಟ್ಟಿಯಲ್ಲಿರುವ  (ವಿರೋಧಿ ಪಕ್ಷಾಂತರ ಅವಕಾಶ)ವಿಷಯಗಳಲ್ಲಿ ರಾಜ್ಯಪಾಲರು ಯಾವುದೇ ಪಾತ್ರವನ್ನು ಹೊಂದಿಲ್ಲ. ಪ್ರಜಾಪ್ರಭುತ್ವ ಸಂವಿಧಾನದ ಮೂಲಭೂತ ರಚನೆಯಾಗಿದೆ. ಕೆಲವು ನಿರ್ಧಾರಗಳು ಪ್ರಜಾಪ್ರಭುತ್ವ ವಿರೋಧಿ ಎನಿಸಿದರೆ ಅದು ನ್ಯಾಯಾಂಗ ವಿಮರ್ಶೆಗೆ ಒಳಗಾಗಬೇಕಾಗುತ್ತದೆ ಎಂದು ಪೀಠ ಹೇಳಿದೆ. 

ವೆಬ್ದುನಿಯಾವನ್ನು ಓದಿ