ಅರವಿಂದ್ ಕೇಜ್ರಿವಾಲ್‌ರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹೋಲಿಸಿದ ಕಾಂಗ್ರೆಸ್

ಶುಕ್ರವಾರ, 3 ಜುಲೈ 2015 (14:35 IST)
ಜಾಹೀರಾತಿಗಾಗಿ 500 ಕೋಟಿ ರೂಪಾಯಿ ವೆಚ್ಚ ಮಾಡಿದ ಆಮ್ ಆದ್ಮಿ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಅಜೋಯ್ ಕುಮಾರ್, ಅರವಿಂದ್ ಕೇಜ್ರಿವಾಲ್ ಸ್ವಂತ ಪ್ರಚಾರಕ್ಕಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ   
 
2015-16ರ ಸಾಲಿನ ಆಪ್ ಸರಕಾರದ ಬಜೆಟ್ ಗಾತ್ರದ ಬಗ್ಗೆ ಕಿಡಿಕಾರಿದ ಕುಮಾರ್, ಏಕವ್ಯಕ್ತಿಯನ್ನು ಹಿರೋನಂತೆ ಬಿಂಬಿಸಲು ಹಣವನ್ನು ವ್ಯರ್ಥವಾಗಿ ಉಪಯೋಗಿಸಲಾಗುತ್ತಿದೆ. ಇದೊಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಸ್ಕ್ರತಿಯಾಗಿದೆ ಎಂದು ವ್ಯಂಗ್ಯವಾಡಿದರು.  
 
ದೆಹಲಿ ಸರಕಾರ ಜಾಹೀರಾತಿಗಾಗಿ 30-40 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಜಾಹೀರಾತಿನಲ್ಲಿ ದುಡ್ಡಿನಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಇತರ ಜನೋಪಯೋಗಿ ಕಾರ್ಯಕ್ರಮಗಳನ್ನು ಬಳಸಬಹುದಾಗಿತ್ತು. ಸರಕಾರದ ಜಾಹೀರಾತಿನ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಂತ ಪ್ರಚಾರಕ್ಕಾಗಿ ಮತ್ತು ಸ್ವಯಂ ಬಡ್ತಿಗಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿಯಂತೆ ಬದಲಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಜಾಹಿರಾತಿಗಾಗಿ ದುಂದು ವೆಚ್ಚ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಸರಕಾರವನ್ನು ಬಿಜೆಪಿ ಕೂಡಾ ಟೀಕಿಸಿದೆ.
 

ವೆಬ್ದುನಿಯಾವನ್ನು ಓದಿ