ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಮಾಡುತ್ತಿದೆ: ಸುಮಿತ್ರಾ ಮಹಾಜನ್

ಮಂಗಳವಾರ, 22 ಏಪ್ರಿಲ್ 2014 (12:05 IST)
ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಮಾಡುತ್ತಿದೆ, ಅದರ ಮೂಲ ವಿಚಾರಧಾರೆ ನಾಶವಾಗಿ ಹೋಗಿದೆ ಎಂದು ಇಂದೋರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ದೂಷಿಸಿದ್ದಾರೆ. 
ದೇಪಾಲಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಅಳಿಯ ರಾಬರ್ಟ್ ವಾಧ್ರಾರವರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ "ಕಾಂಗ್ರೆಸ್ ತಾಯಿ, ಮಗ ಮತ್ತು ಭಾವನ ಸ್ವಂತ ಸಂಸ್ಥೆಯಾಗಿ ಬಿಟ್ಟಿದೆ. ಕಾಂಗ್ರೆಸ್‌ನ ಮೂಲತತ್ವಗಳು ಮಾಯವಾಗಿ ಹೋಗಿವೆ. ಸ್ವಾತಂತ್ರ್ಯದ ನಂತರ, ಈ ದೇಶದ ಬಡವರು ಕಾಂಗ್ರೆಸ್ ಪಕ್ಷದ ವಂಚನೆಗೆ ಸಿಲುಕಿದ್ದಾರೆ ಎಂದು ಹೇಳಿದರು.
 
ಇಂದೋರ್‌ನಿಂದ ಈ ಹಿಂದಿನ 7 ಲೋಕಸಭಾ ಚುನಾವಣೆಯನ್ನು ಗೆದ್ದಿರುವ ಸುಮಿತ್ರಾ ಮಹಾಜನ್ ಕಾಂಗ್ರೆಸ್ ನೇತೃತ್ವದಲ್ಲಿ 10 ವರ್ಷ ಆಡಳಿತ ನಡೆಸಿದ ಸರಕಾರ ಹಣದುಬ್ಬರ ಮತ್ತು ಭೃಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. 
 
ತನ್ನ ಪ್ರಮುಖ ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಪಟೇಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇರಿದರೆ ಹಣದುಬ್ಬರಕ್ಕೆ ನಿಯಂತ್ರಣ ಹಾಕಲಿದೆ ಮತ್ತು ಭೃಷ್ಟಾಚಾರಕ್ಕೆ ಅಂತ್ಯ ಕಾಣಿಸಲಿದೆ ಎಂದರು.   

ವೆಬ್ದುನಿಯಾವನ್ನು ಓದಿ