ಭೂಸ್ವಾಧೀನ ಮಸೂದೆಯಲ್ಲಿ ಕಾಂಗ್ರೆಸ್ ಮುಖವಾಡ ಕಳಚಿದೆ: ನಿತಿನ್ ಗಡ್ಕರಿ

ಮಂಗಳವಾರ, 1 ಸೆಪ್ಟಂಬರ್ 2015 (17:35 IST)
ಭೂಸ್ವಾಧೀನ ಮಸೂದೆಯಲ್ಲಿ ದಂದ್ವ ನೀತಿ ತೋರುವ ಮೂಲಕ ಕಾಂಗ್ರೆಸ್ ನಾಯಕರ ಮುಖವಾಡ ಕಳಚಿ ಬಿದ್ದಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
 
ಕೇಂದ್ರ ಸರಕಾರದ ಮಹತ್ವದ ಭೂ ಸ್ವಾಧಿನ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ರೈತ ವಿರೋಧಿ ಕೃತ್ಯವೆಸಗಿದೆ. ಮುಂಬರುವ ದಿನಗಳಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಭೂ ಸ್ವಾಧೀನ ಮಸೂದೆಯಲ್ಲಿರುವ ಅಂಶಗಳಿಗೆ ತಿದ್ದುಪಡಿ ತಂದು ರೈತರ ಪರವಾಗಿಸಲು ಸರಕಾರ ಬದ್ಧವಾಗಿದ್ದರೂ ವಿಪಕ್ಷಗಳು ಅನಗತ್ಯವಾಗಿ ಕೇಂದ್ರ ಸರಕಾರವನ್ನು ದೂರುತ್ತಿವೆ ಎಂದು ತಿರುಗೇಟು ನೀಡಿದರು. 
 
ಏತನ್ಮಧ್ಯೆ ಭೂ ಸ್ವಾಧೀನ ಮಸೂದೆಯ ಸುಗ್ರಿವಾಜ್ಞೆ ಅವಧಿ ಸೋಮವಾರದಂದು ಅಂತ್ಯಗೊಂಡಿದೆ ಎಂದು ಗಡ್ಕರಿ ಹೇಳಿದ್ದಾರೆ. 
 
ಭೂಸ್ವಾಧೀನ ಮಸೂದೆಯನ್ನು ರಾಜ್ಯ ಸರಕಾರಗಳು ಜಾರಿಗೊಳಿಸಲು ಮುಕ್ತವಾಗಿದೆ. ನೀತಿ ಆಯೋಗ ಸಭೆಯಲ್ಲಿ ಹಲವು ಮುಖ್ಯಮಂತ್ರಿಗಳು ಭೂ ಸ್ವಾಧೀನ ಮಸೂದೆಗೆ ಒಪ್ಪಿಗೆ ಸೂಚಿಸಿದ್ದರೂ ಕಾಂಗ್ರೆಸ್ ಅಡಳಿತವಿರುವ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ