ಕಾಂಗ್ರೆಸ್-ಜೆಡಿಎಸ್ ಕಚೇರಿ ವಿವಾದ: ಡಿ.31ರೋಳಗೆ ಖಾಲಿ ಮಾಡುವಂತೆ ಜೆಡಿಎಸ್‌ಗೆ ಆದೇಶಿಸಿದ ಸುಪ್ರೀಂ

ಶುಕ್ರವಾರ, 19 ಡಿಸೆಂಬರ್ 2014 (18:11 IST)
ಕಾಂಗ್ರೆಸ್ ಹಾಗೂ ಜೆಡಿಎಸ್ ಕಟ್ಟಡ ವಿಚಾರಣೆಗೆ ಸಂಬಂಧಿಸಿದಂತೆ ಜೆಡಿಎಸ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ್ದು, ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಆದೇಶಿಸಿದೆ.
 
ಜೆಡಿಎಸ್ ಪ್ರಸ್ತುತ ಕಾರ್ಯನಿರ್ವಹಣೆಗಾಗಿ ಬಳಸಿಕೊಳ್ಳುತ್ತಿರುವ ಬೆಂಗಳೂರಿನ ರೇಸ್ ಕೋರ್ಸ್ ಬಳಿಯ ಕಚೇರಿಯನ್ನು ಕಾಂಗ್ರೆಸ್‌ಗೆ ವಹಿಸುವಂತೆ ಈ ಆದೇಶ ನೀಡಲಾಗಿದ್ದು, ಜೆಡಿಎಸ್ ಈ ಕಚೇರಿ ನಮಗೆ ಸೇರಿದ್ದು, ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು. ಆದರೆ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಾಲಯ, ಕಾಂಗ್ರೆಸ್ ಪಕ್ಷದ ಪರವಾಗಿ ತೀರ್ಪಿತ್ತಿತ್ತು. ಆದರೆ ಈ ತೀರ್ಪನ್ನು ಪುನರ್ ಪರಿಶೀಲನೆಗೊಳಡಿಸುವಂತೆ ಜೆಡಿಎಸ್ ಮನವಿ ಮಾಡಿತ್ತು. 
 
ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಇಂದು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಪ್ರಸ್ತುತ ನೀವು ಆಡಳಿತಾತ್ಮಕ ವ್ಯವಹಾರಕ್ಕಾಗಿ ಬಳಸುತ್ತಿರುವ ಕಚೇರಿಯು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾಗಿದ್ದು, ಡಿ.31ರ ಒಳಗೆ ತೆರವುಗೊಳಿಸಬೇಕಾಗಿ ಸೂಚಿಸಿದೆ. ಸುಪ್ರೀಂನ ಈ ತೀರ್ಪು ಜೆಡಿಎಸ್‌ಗೆ ಪ್ರಸ್ತುತ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ವೆಬ್ದುನಿಯಾವನ್ನು ಓದಿ