ಇಶ್ರತ್ ಜಹಾನ್ ಪ್ರಕರಣದಲ್ಲಿ ಮೋದಿ ಸಿಲುಕಿಸಲು ಕಾಂಗ್ರೆಸ್ ನಾಯಕನ ಪಿತೂರಿ ಇತ್ತು: ಮಾಜಿ ಐಬಿ ಅಧಿಕಾರಿ

ಶನಿವಾರ, 13 ಫೆಬ್ರವರಿ 2016 (16:15 IST)
ಇಶ್ರತ್ ಜಹಾನ್ ಮಾನವ ಬಾಂಬ್ ಆಗಿದ್ದಳು ಎಂದು ಉಗ್ರ ಡೇವಿಡ್ ಹೇಡ್ಲಿ ಬಾಯ್ಬಿಟ್ಟ ಬಳಿಕ ಇಹ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಸ್ಪೋಟಕ ಮಾಹಿತಿಗಳು ಹೊರಬರಲು ಆರಂಭವಾಗಿವೆ. ಮಾಜಿ ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್ ಅವರೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ. 2004 ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ  ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಯವರನ್ನು ಸಿಲುಕಿಸುವಂತೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಅವರು ಹೇಳಿದ್ದಾರೆ.
 
ಕಳೆದ ವರ್ಷ ನಿವೃತ್ತರಾಗಿರುವ 1979ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಕುಮಾರ್, ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿಯವರ ವರ್ಚಸ್ಸನ್ನು ಹಾಳುಗೆಡವಲು ರೂಪಿಸಿದ ಪಿತೂರಿಯ ಮಾಸ್ಟರ್ ಮೈಂಡ್ ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯರೊಬ್ಬರಾಗಿದ್ದರು ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ. 
 
ಮೋದಿ ಯುಪಿಎ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಹೊರಹೊಮ್ಮಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರ ವಿರುದ್ಧ ಹೇಳಿಕೆಯನ್ನು ನೀಡುವಂತೆ ಯುಪಿಎ ಸರ್ಕಾರ ಬಯಸಿತ್ತು. ನನ್ನ ಹೇಳಿಕೆಯ ಆಧಾರದ ಮೇಲೆ ಮೋದಿಯವರನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ಮಾಡುವುದು ಅವರ ತಂತ್ರವಾಗಿತ್ತು ಎಂದು ಮಾಜಿ ಐಬಿ ಅಧಿಕಾರಿ ತಿಳಿಸಿದ್ದಾರೆ.  
 
ನಿವೃತ್ತಿಯ ಬಳಿಕ ನಿಮಗೆ ಅತಿ ದೊಡ್ಡ ಪೋಸ್ಟ್ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಆದರೆ ಸುಳ್ಳು ಹೇಳಿಕೆ ನೀಡಲು ನಾನು ಒಪ್ಪಲಿಲ್ಲ. ತಮ್ಮನ್ನಷ್ಟೇ ಅಲ್ಲದೆ ಹಲವಾರು ಸಾಕ್ಷಿಗಳ ಮೇಲೆ ಸುಳ್ಳು ಸಾಕ್ಷ್ಯ ನುಡಿಯುವಂತೆ ಒತ್ತಡ ಹೇರಲಾಗಿತ್ತು. ಜತೆಗೆ ಗುಪ್ತಚರ ಇಲಾಖೆಯ ವರ್ಚಸ್ಸು ಕೆಡಿಸಲು ಕುತಂತ್ರ ನಡೆಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ