ಯಡ್ಡಿ, ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೆಗೊಳ್ಳದಂತೆ ಕಾಂಗ್ರೆಸ್ ನಾಯಕರೇ ಒತ್ತಡ ಹೇರಿದ್ದರು: ಹಂಸರಾಜ್ ಭಾರದ್ವಾಜ್

ಸೋಮವಾರ, 30 ಮಾರ್ಚ್ 2015 (17:24 IST)
ಸತತ ಸೋಲುಗಳ ಚಕ್ರದಡಿಯಲ್ಲಿ ಕಾಂಗ್ರೆಸ್ ತತ್ತರಿಸುತ್ತಿದ್ದು, ಅದರ ಮಧ್ಯೆ ಮಾಜಿ ಕಾನೂನು ಸಚಿವ ಹಂಸರಾಜ್ ಭಾರದ್ವಾಜ್ ಕರ್ನಾಟಕದಲ್ಲಿ ಪಕ್ಷ ಗಳಿಸಿರುವ ಅಪರೂಪದ ದಿಗ್ವಿಜಯಕ್ಕೂ ಪ್ರಶ್ನೆ ಎತ್ತಿ ಪಕ್ಷಕ್ಕೆ ಇರಿಸು ಮುರಿಸು ತಂದಿತ್ತಿದ್ದಾರೆ. ಕಾಂಗ್ರೆಸ್ ನಾಯಕರು  ಬಿಜೆಪಿಯ ನಾಯಕರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. 

ಕೇಂದ್ರದಲ್ಲಿ ಯುಪಿಎ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದ ಭಾರದ್ವಾಜ್, ಯುಪಿಎ  ಭೃಷ್ಟಾಚಾರದಿಂದಾಗಿ ಜನಪ್ರಿಯತೆ ಕಳೆದುಕೊಂಡಿದೆ ಎಂದು ತಮ್ಮ ಪಕ್ಷವನ್ನೇ ದೂಷಿಸಿದ್ದಾರೆ.
 
ತಾವು ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪನವರ ಮೇಲೆ  ಕ್ರಮ ಕೈಗೊಳ್ಳಲು ಪ್ರಯತ್ನಿಸಿದಾಗ ಕಾಂಗ್ರೆಸ್ ನಾಯಕರೇ ನನಗೆ ಅಡ್ಡಿ ಪಡಿಸಿದ್ದರು ಎಂದು ಭಾರದ್ವಾಜ್  ಹೊಸ ಬಾಂಬ್ ಸಿಡಿಸಿದ್ದಾರೆ. 
 
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಅವರು, ರೆಡ್ಡಿ ಸಹೋದರರು ಮತ್ತು ಬಿಎಸ್ ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುವ ಆಲೋಚನೆಯನ್ನು ಕೈ ಬಿಡುವಂತೆ  ಕಾಂಗ್ರೆಸ್ ನಾಯಕರು ನನಗೆ ಒತ್ತಾಯಿಸಿದ್ದರು.  ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಬಹಳ ಉತ್ತಮ ಬಾಂಧವ್ಯ  ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. 
 
ಆದರೆ, ಕರ್ತವ್ಯ ಪ್ರಜ್ಞೆ ನನಗೆ ಬಿಜೆಪಿ ನಾಯಕರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ