ಮೋದಿಯ "ಮೇಡ್ ಇನ್ ಇಂಡಿಯಾ" ಘೋಷಣೆಗೆ ಕಾಂಗ್ರೆಸ್ ಹಾಸ್ಯ

ಮಂಗಳವಾರ, 19 ಆಗಸ್ಟ್ 2014 (10:28 IST)
ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಒಳ್ಳೆಯ ದಿನಗಳ ಭರವಸೆ ನೀಡಿದ್ದರು. ಪ್ರಧಾನಮಂತ್ರಿಯಾದ ಬಳಿಕ ಅವರು ಆಗಸ್ಟ್ 15ರಂದು , "ಕಮ್, ಮೇಕ್ ಇನ್ ಇಂಡಿಯಾ" ಮತ್ತು "ಮೇಡ್ ಇನ್ ಇಂಡಿಯಾ" ಘೋಷಣೆಗಳನ್ನು ಮೊಳಗಿಸಿದ್ದರು. ಮೋದಿ ಅವರ "ಮೇಡ್ ಇನ್ ಇಂಡಿಯಾ" ಘೋಷಣೆಯನ್ನು  ಈಗ ಕಾಂಗ್ರೆಸ್ ಮುಖಂಡರು ಹಾಸ್ಯ ಮಾಡಿದ್ದಾರೆ. 

ಭಾನುವಾರ ರಾತ್ರಿಯ ನಂತರ ಇಂಗ್ಲೆಂಡ್‌ನಲ್ಲಿ ಪಂದ್ಯ ಮುಗಿದ ಬಳಿಕ, ದಿಗ್ವಿಜಯ್ ಸಿಂಗ್, ಅಭಿಷೇಕ್ ಮನು ಸಿಂಘ್ವಿ ಮತ್ತು ಪ್ರಿಯಾಂಕ ಚತುರ್ವೇದಿಯ ಈ ಬಗ್ಗೆ ಟ್ವೀಟ್ ಆರಂಭಿಸಿದ್ದಾರೆ.ಟ್ವಿಟರ್‌ನಲ್ಲಿ ದಿಗ್ವಿಜಯ್ ಸಿಂಗ್ ಬರೆದಿದ್ದಾರೆ-ನನ್ನ ಪುತ್ರಿ ಕಳಿಸಿದ್ದಾರೆ. ಮೋದಿ ಭಾಷಣವನ್ನು ಗಂಭೀರವಾಗಿ ತೆಗೆದುಕೊಂಡ ಮೊದಲ ಜನರು ಭಾರತೀಯ ಕ್ರಿಕೆಟ್ ತಂಡ. ಅವರ ರನ್‌ಗಳು ಇನ್ನು ಮೇಲೆ "ಮೇಡ್ ಇನ್ ಇಂಡಿಯಾ' ಮಾತ್ರವಾಗುತ್ತದೆ ಎಂದು ಹೇಳಿದ್ದಾರೆ.

ಹೀಗೆ ಭಾರತದ ಕ್ರಿಕೆಟ್ ತಂಡ ಇಂಗ್ಲೆಂಡ್‌ ಟೆಸ್ಟ್ ಪಂದ್ಯಗಳಲ್ಲಿ 3-1ರಿಂದ ಅನುಭವಿಸಿದ ಸೋಲನ್ನು ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಹಾಸ್ಯ ಮಾಡುವ ಅಸ್ತ್ರವಾಗಿ ಬಳಸುತ್ತಿದೆ. 
 
 4 ವರ್ಷಗಳಲ್ಲಿ 13 ವಿದೇಶಿ ಸೋಲುಗಳು(ಆಡಿದ್ದು ಒಟ್ಟು 15). ನಾವು ಕೊನೆಯಲ್ಲಿ ಗೆದ್ದಿದ್ದು ಯಾವಾಗ? ನಾವು ನಿಜವಾಗಲೂ ಭಾರತದ ರಾಷ್ಟ್ರೀಯವಾದಿ ತಂಡ. ಏಕೆಂದರೆ ಭಾರತದಲ್ಲಿ ಮಾತ್ರ ನಮಗೆ ಗೆಲ್ಲುವುದಕ್ಕೆ ಸಾಧ್ಯ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಟ್ವೀಟ್ ಮಾಡಿದ್ದಾರೆ.
 
 ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಚತುರ್ವೇದಿಯ ಭಾರತದ ಕ್ರಿಕೆಟ್ ತಂಡ ಭಾರತದ ಮಹಿಳಾ ಕ್ರಿಕೆಟ್ ತಂಡದಿಂದ ಪಾಠಗಳನ್ನು ಕಲಿಯಬೇಕು ಎಂದು ಸಲಹೆ ಮಾಡಿದರು. 
 

ವೆಬ್ದುನಿಯಾವನ್ನು ಓದಿ