ಆಪ್ ಶಾಸಕರಿಗೆ ಸಂಸದೀಯ ಕಾರ್ಯದರ್ಶಿಗಳ ಸ್ಥಾನ ಕಾಂಗ್ರೆಸ್ ವಿರೋಧ

ಸೋಮವಾರ, 29 ಜೂನ್ 2015 (19:08 IST)
ಆಮ್ ಆದ್ಮಿ ಪಕ್ಷದ 21 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿರುವ ದೆಹಲಿ ಸರಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
 
ಶಾಸಕರನ್ನು ಒಗ್ಗೂಡಿಸಿ ವಿಐಪಿ ಸ್ಥಾನಮಾನ ಕೊಡಿಸಲು ದೆಹಲಿ ಸರಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ವಿಧಾನಸಭೆಯಲ್ಲಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿಸುವ ಬಗ್ಗೆ ಮಸೂದೆಯನ್ನು ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
 
ದೆಹಲಿ ವಿಧಾನಸಭೆಯಲ್ಲಿ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಪಿಲ್ ಮಿಶ್ರಾ ಮಸೂದೆಯನ್ನು ಮಂಡಿಸಿದ್ದು ಜೆಹಲಿ ಬಜೆಟ್ ಅಧಿವೇಶನದಲ್ಲಿ ಅಂಗೀಕಾರ ಪಡೆದಿದೆ ಎಂದು ಆಪ್ ಮೂಲಗಳು ತಿಳಿಸಿವೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಅದಿಕಾರಕ್ಕೆ ಬಂದ ಕೂಡಲೇ 21 ಆಮ್ ಆದ್ಮಿ ಶಾಸಕರಿಗೆ ಸಚಿವಾಲಯದ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿ ಇದರಿಂದ ಅಡಳಿತ ನಡೆಸಲು ಸುಗಮವಾಗುತ್ತದೆ ಎಂದು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.  
 

ವೆಬ್ದುನಿಯಾವನ್ನು ಓದಿ