ಸ್ಮೃತಿ ಇರಾನಿ 'ನೆಲ ಒರೆಸುವವಳು' ಎಂದ ಕಾಮತ್‌ಗೆ ಮಹಿಳಾ ಆಯೋಗ ನೋಟಿಸ್

ಶನಿವಾರ, 1 ಆಗಸ್ಟ್ 2015 (17:30 IST)
ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರ ವಿರುದ್ಧ ಕಾಂಗ್ರೆಸ್ ನಾಯಕ ಗುರುದಾಸ್ ಕಾಮತ್ ಆಡಿದ್ದ ಹಗುರ ಮಾತುಗಳು ರಾಷ್ಟ್ರೀಯ ಮಹಿಳಾ ಆಯೋಗದ ಕಣ್ಣನ್ನು ಕೆಂಪಗಾಗಿಸಿವೆ. ಈ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ಆಯೋಗ ಕಾಮತ್ ಅವರಿಗೆ ನೋಟಿಸ್ ಕಳುಹಿಸಿದೆ.

ಸ್ಮೃತಿಯವರ ಶೈಕ್ಷಣಿಕ ಹಿನ್ನೆಲೆ ಬಗ್ಗೆ ಮಾತನಾಡುವಾಗ, ಕಾಮತ್(60) 'ನೆಲ ಒರೆಸುವವಳು' ಎಂದಿದ್ದರು. ಅಲ್ಲದೇ ನಿರಕ್ಷರಕುಕ್ಷಿಯಾದ ಅವರಿಗೆ ಯಾವ ಅರ್ಹತೆಯ ಮೇಲೆ ಮಾನವ ಸಂಪನ್ಮೂಲ ಸಚಿವೆಯನ್ನಾಗಿಸಲಾಗಿದೆ ಎಂದು ಪ್ರಶ್ನಿಸಿದ್ದರು. 
 
ಸಚಿವೆಯ ಕುರಿತು ತುಚ್ಛ ಮಾತುಗಳನ್ನಾಡಿರುವ ಕಾಮತ್ ಅವರಿಗೆ ನಾವು ಶೋಕಾಸ್ ನೋಟಿಸ್ ಕಳುಹಿಸಿದ್ದೇವೆ. ಒಂದು ವಾರದೊಳಗೆ ಅದಕ್ಕೆ ಉತ್ತರಿಸುವಂತೆ ಸೂಚಿಸಿದ್ದೇವೆ ಎಂದು ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಸ್ಪಷ್ಟಪಡಿಸಿದ್ದಾರೆ.
 
ರಾಜಸ್ಥಾನದ 5 ಜಿಲ್ಲೆಗಳಲ್ಲಿ ಮುನ್ಸಿಪಲ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ  ಕಾಮತ್  ಮಾನವ ಸಂಪನ್ಮೂಲ ಸಚಿವೆಯಾಗಲು ಸ್ಮೃತಿ ಇರಾನಿ ಯಾವ ಅರ್ಹತೆಯನ್ನು ಹೊಂದಿದ್ದಾರೆ.ಇರಾನಿ ಕುಟುಂಬದ ಆರ್ಥಿಕ ಪರಿಸ್ಥತಿ ಬಹಳ ಕೆಟ್ಟದ್ದಾಗಿತ್ತು. ಆ ಕಾರಣಕ್ಕಾಗಿ ಅವರು ವೆರ್ಸೋವಾದ ಹೊಟೆಲ್‌ನಲ್ಲಿ ಮಾಣಿ ಕೆಲಸ ಮಾಡಿದ್ದರು.
 
 ಅಲ್ಲಿ ಅವರು ಟೇಬಲ್ ಒರೆಸುವ ಕೆಲಸವನ್ನು ಮಾಡುತ್ತಿದ್ದರು.ಅನಕ್ಷರಸ್ಥರಾಗಿರುವ ಅವರಿಗೆ ಸಚಿವೆ ಪದವಿ ಪಡೆಯುವ ಅರ್ಹತೆ ಇಲ್ಲ. ಆದರೆ ಪ್ರಧಾನಿ ಮೋದಿಯವರು ಸ್ವ ಹಿತಾಸಕ್ತಿಯಿಂದ ಅವರನ್ನು ಸಚಿವೆ ಪದವಿಗೇರಿಸಿದ್ದಾರೆ. ಅವರು ದೆಹಲಿಯಿಂದ ಬಂದು ಮುಂಬೈನಲ್ಲಿ ನೆಲಸಿದ್ದಾರೆ.  ಮುಂಬೈನ ಹೋಟೆಲ್‌ಗಳಲ್ಲಿ ನೆಲ ಒರೆಸಿದ್ದುದು ಅವರು ನಿರ್ವಹಿಸಿದ ಮೊದಲ ಉದ್ಯೋಗ.  ಅದರಲ್ಲೇನೂ ತಪ್ಪಿಲ್ಲ. ಚಹಾ ಮಾರಾಟ ಮಾಡುವವವನು ಪ್ರಧಾನಿಯಾಗುತ್ತಾನೆಂದರೆ  ನೆಲ ಒರೆಸುವವಳು ಸಚಿವೆಯಾಗಲು ಸಾಧ್ಯವಿಲ್ಲವೇ ಎಂದು ಹಗುರವಾಗಿ ಮಾತನಾಡಿದ್ದರು. 

ವೆಬ್ದುನಿಯಾವನ್ನು ಓದಿ