ಪ್ರತಿಪಕ್ಷ ನಾಯಕನ ಸ್ಥಾನ ವಿಚಾರ; ಸ್ಪೀಕರ್ ನಿರ್ಣಯವನ್ನು ಕಾಂಗ್ರೆಸ್ ಒಪ್ಪಬೇಕೆಂದ ರಾಜನಾಥ್ ಸಿಂಗ್

ಶನಿವಾರ, 23 ಆಗಸ್ಟ್ 2014 (12:59 IST)
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಲು ನಿರಾಕರಿಸಿದ ಸ್ಪೀಕರ್ ಅವರ ನಿರ್ಣಯಕ್ಕೆ ಕಾಂಗ್ರೆಸ್ ಗೌರವ ನೀಡಬೇಕು ಎಂದು ಕೇಂದ್ರ ಗ್ರಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 


 
ಸಂವಿಧಾನದ ಪ್ರಕಾರ  ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು ಪಕ್ಷ ಪ್ರತಿಶತ 10 ರಷ್ಟು ಸ್ಥಾನಗಳನ್ನು ಪಡೆದಿರಬೇಕು. ಆದರೆ ದುರದೃಷ್ಟಾವತ್ ಹಾಗಾಗಿಲ್ಲ. ಆದ್ದರಿಂದ ಅವರಿದನ್ನು ಒಪ್ಪಿಕೊಳ್ಳಲೇ ಬೇಕು ಎಂದು ಸಿಂಗ್  ಅಭಿಪ್ರಾಯ ಪಟ್ಟಿದ್ದಾರೆ. 
 
ವಿರೋಧ ಪಕ್ಷದ ನಾಯಕನ  ಸ್ಥಾನದ ಅಗತ್ಯದ ಕುರಿತು ಒತ್ತಿ ಹೇಳಿದ  ಮುಖ್ಯ ನ್ಯಾಯಮೂರ್ತಿ ಆರ್ ಎಮ್ ಲೋಧಾ  ನೇತೃತ್ವದ ಪೀಠ ವಿರೋಧ ಪಕ್ಷದ ನಾಯಕನ ಸ್ಥಾನ  ಸರಕಾರದಿಂದ ವಿಭಿನ್ನವಾದ ಜನಪ್ರತಿನಿಧಿಗೆ ಧ್ವನಿಯನ್ನೆತ್ತುವ ಅವಕಾಶ ಕೊಡುತ್ತದೆ. ಹಾಗಾಗಿ  2 ವಾರಗಳಲ್ಲಿ  ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ವಿಚಾರದ ಕುರಿತು ಸ್ಪಷ್ಟ ನಿಲುವಿಗೆ ಬರುವಂತೆ ಕೇಂದ್ರಕ್ಕೆ ಸೂಚಿಸಿದ್ದಾರೆ. 
 
ಅಲ್ಲದೇ  ವಿರೋಧ ಪಕ್ಷದ ನಾಯಕನ ವಿಚಾರ ಕೇವಲ ಲೋಕಪಾಲ್ ಕಾನೂನಿನಲ್ಲಿ ಮಾತ್ರ ಪ್ರಸ್ತುತವಾಗಿಲ್ಲ, ಅಸ್ತಿತ್ವದಲ್ಲಿರುವ ಇತರ ಕೆಲ ಕಾನೂನು ಮತ್ತು  ಮತ್ತೆ ಹೊಸದಾಗಿ ಬರಲಿರುವ ಕಾನೂನುಗಳು ಕೂಡ ಇದಕ್ಕೆ ಸಂಬಂಧಿಸಿವೆ ಎಂಬುದನ್ನು ಸಹ ಕೋರ್ಟ್ ಗಮನಿಸಿದೆ. 44 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಲೋಕಸಭೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬಲವಾದ ಒತ್ತಡ ಹೇರುತ್ತಿದೆ. 

ವೆಬ್ದುನಿಯಾವನ್ನು ಓದಿ