ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

ಭಾನುವಾರ, 19 ಏಪ್ರಿಲ್ 2015 (13:01 IST)
ಅನೇಕ ದಿನಗಳ ಕಾಲ ಕಣ್ಮರೆಯಾಗಿ ಸಂಸತ್ತಿನಲ್ಲಿ ಎಲ್ಲ ಚರ್ಚೆಗೆ ಗ್ರಾಸವೊ ದಗಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದಿಢೀರ್ ಪ್ರತ್ಯಕ್ಷರಾಗಿ ರೈತರ ಬೃಹತ್ ರಾಲಿಯಲ್ಲಿ ಮಾತನಾಡಿದರು. ಭೂಸ್ವಾಧೀನ ಕಾಯ್ದೆ ವಿರೋಧಿಸಿ ರೈತರ ಬೃಹತ್ ರಾಲಿಯನ್ನು  ಜಮೀನು ವಾಪಸಿ ಕಾರ್ಯಕ್ರಮ ಎಂದೂ ಕೂಡ ಕರೆಯಲಾಗಿದ್ದು,   ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದೆ. ರೈತರ ರಾಲಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು. ಅವರ ಭಾಷಣದ ಕೆಲವು ಮುಖ್ಯಾಂಶಗಳು ಕೆಳಗಿವೆ:
 
1.  ನರೇಂದ್ರ ಮೋದಿ ಹಿಂದೂಸ್ತಾನದ  ಪ್ರಧಾನಿಯಾಗಿದ್ದರೂ ಗುಜರಾತ್ ಪ್ರಧಾನಿ ರೀತಿ ನಡೆದುಕೊಳ್ತಿದ್ದಾರೆ. 
2.  ಒಮ್ಮೆ ನಾನು ಆಸ್ಟ್ರೇಲಿಯಾದ ಪ್ರಪಂಚದಲ್ಲೇ ಹೆಸರಾದ ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಸಾವಿರಾರು ಎಕರೆ ಜಮೀನಿನಲ್ಲಿ ಗಣಿ ಕೆಲಸ ನಡೆಯುತ್ತಿತ್ತು. ಆಗ ನಾನು ಅಲ್ಲಿದ್ದ ಜಮೀನು ಯಾರದ್ದೆಂದು ಕೇಳಿದೆ. ಇದು 300 ಕುಟುಂಬಗಳಿಗೆ ಸೇರಿದ ಜಮೀನು ಎಂದು ಹೇಳಿದರು. ಅದನ್ನು ಕೊಟ್ಟವರು ಶ್ರೀಮಂತರಾಗಿರಬಹುದು ಎಂದುಕೊಂಡಿದ್ದೆ. ಐಷಾರಾಮಿ ಕಾರಿನಲ್ಲಿ ಓಡಾತ್ತಿರಬಹುದು ಎಂದುಕೊಂಡಿದ್ದೆ. ಆದರೆ ಅವರು ಕಾರಿನಲ್ಲಿ ಕೂಡ ಓಡಾಡುವಂತಿರಲಿಲ್ಲ.  ಗಣಿಗೆ ತಮ್ಮ ಜಾಗ ನೀಡಿದ್ದವರೆಲ್ಲಾ ಕಡುಬಡವರಾಗಿದ್ದರು.ಭೂಸ್ವಾಧೀನ ಜಾರಿಯಾದ್ರೆ ರೈತರಿಗೂ ಅದೇ ಗತಿ ಬರುತ್ತದೆ.  
 
3. ಬಡವರ ಉದ್ಧಾರ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಬಡವರಿಗಾಗಿ ಸರ್ಕಾರ ಏನನ್ನೂ ಕೊಟ್ಟಿಲ್ಲ. 
4. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ರೈತರ ಸಾಲಗಳನ್ನು ಮನ್ನಾ ಮಾಡಿದ್ದೆವು. ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧತೆ ಹೊಂದಿತ್ತು. 
5.  ದೇಶದಲ್ಲಿ ಕಳೆದ 50 ವರ್ಷದ  ಗಲೀಜು ಸ್ವಚ್ಛಗೊಳಿಸುವುದಾಗಿ ವಿದೇಶಕ್ಕೆ ಹೋದಾಗ ಹೇಳಿಕೆ ನೀಡಿದ್ದರು. ಇದು ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ.
 
6. ಬಡವರಿಗೆ ಯುಪಿಎ ಸರ್ಕಾರ ಉತ್ತಮ ಯೋಜನೆ ತಂದಿತ್ತು. ಆದರೆ ಎನ್‌ಡಿಎ ಸರ್ಕಾರ ಬಡವರಿಗೆ ಏನನ್ನೂ ಮಾಡಿಲ್ಲ. ಸುಗ್ರೀವಾಜ್ಞೆಯಿಂದ ರೈತರ ಭೂಮಿ ಲಪಟಾಯಿಸಲು ಯತ್ನಿಸುತ್ತಿದೆ. 
7. ರೈತರ ಮನಸ್ಸಿನಲ್ಲಿ ಭಯ,ದುಗುಡು ಆವರಿಸಿದೆ. ರಾತ್ರಿ ಬೆಳಗಾಗುವುದರಲ್ಲಿ ಏನಾಗುತ್ತದೋ ಗೊತ್ತಿಲ್ಲ. ರೈತರ ಜಮೀನನ್ನು ಎಂದು ಕಸಿದುಕೊಳ್ಳುತ್ತಾರೋ ಗೊತ್ತಿಲ್ಲ.  

ವೆಬ್ದುನಿಯಾವನ್ನು ಓದಿ