ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ಚರ್ಚೆಗೆ ಕಾಂಗ್ರೆಸ್ ಸಿದ್ಧ

ಮಂಗಳವಾರ, 24 ನವೆಂಬರ್ 2015 (19:02 IST)
ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ಬಯಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
 
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಸಲು ಅನುಮತಿ ನೀಡುವಂತೆ ಈಗಾಗಲೇ ಸಭಾಪತಿಯವರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
 
ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನವೆಂಬರ್ 26 ರಿಂದ ಆರಂಭವಾಗಲಿದ್ದು, ಡಿಸೆಂಬರ್ 3 ರವರೆಗೆ ನಡೆಯಲಿದೆ ಎಂದು ಸಂಸತ್ತಿನ ವ್ಯವಹಾರಗಳ ಸಚಿವಾಲಯ ತಿಳಿಸಿದೆ.  
 
ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪತ್ನಿಯ ಬಗ್ಗೆ ನೀಡಿದ ಹೇಳಿಕೆ ಕುರಿತಂತೆ ಸರಕಾರ ಸ್ಪಂದಿಸಿ, ಅಲ್ಪಸಂಖ್ಯಾತರ ಯಾಕೆ ಅಭದ್ರತೆಯಿಂದ ಬಳಲುತ್ತಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. 
 
ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು ಅಭದ್ರತೆಯ ಕೊರತೆ ಎದುರಿಸುತ್ತಿದ್ದರೆ, ಆ ವ್ಯಕ್ತಿ ಯಾಕೆ ಅಭಧ್ರತೆ ಭಾವನೆಯಿಂದ ಬಳಲುತ್ತಿದ್ದಾನೆ ಎನ್ನುವುದು ಪತ್ತೆ ಹಚ್ಚುವುದು ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
 
ಇದಕ್ಕಿಂತ ಮೊದಲು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿ ಅಮೀರ್ ಖಾನ್ ಅಭಿಪ್ರಾಯವನ್ನು ಬೆಂಬಲಿಸಿದ್ದರು. 

ವೆಬ್ದುನಿಯಾವನ್ನು ಓದಿ