ಕಾಂಗ್ರೆಸ್ ನಾಯಕರು ಕನಸಲ್ಲು ಮೋದಿ ಕಂಡು ಬೆವರುತ್ತಿದ್ದಾರೆ: ಮಧ್ಯಪ್ರದೇಶ ಸಿಎಂ

ಶುಕ್ರವಾರ, 19 ಫೆಬ್ರವರಿ 2016 (14:19 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಮುಖಂಡರು ಹಗಲು ಹೊತ್ತು ಬಿಡಿ, ರಾತ್ರಿ ಹೊತ್ತಿನಲ್ಲಿ ಕನಸಲ್ಲಿ ಮೋದಿಯವರನ್ನು ಕಂಡು ಬೆವರುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಲೇವಡಿ ಮಾಡಿದ್ದಾರೆ. 
 
ನೀವು ಅಮೆರಿಕ, ಇಂಗ್ಲೆಂಡ್, ದುಬೈ ಮತ್ತು ಫ್ರಾನ್ಸ್ ದೇಶ ಸೇರಿದಂತೆ ಯಾವ ದೇಶಕ್ಕಾದರೂ ಹೋಗಿ ಅಲ್ಲಿ ನಿಮಗೆ ಮೋದಿ, ಮೋದಿ ಎನ್ನುವ ಶಬ್ದಗಳು ಕೇಳುಬರುತ್ತಿವೆ. ಕಾಂಗ್ರೆಸ್ ಮುಖಂಡರಿಗೂ ಕೂಡಾ ಪ್ರತಿಯೊಂದು ಕಡೆ ಮೋದಿ ಕಾಣಿಸುತ್ತಾರೆಯೇ ಹೊರತು ಬೇರೆ ಯಾರು ಕಾಣಿಸುವುದಿಲ್ಲ. ಕಾಂಗ್ರೆಸ್ಸಿಗರಿಗೆ ರಾತ್ರಿಯೂ ಕನಸಲ್ಲಿ ಮೋದಿ ಬಂದಂತಾಗುತ್ತದೆ ಎಂದು ವ್ಯಂಗ್ಯವಾಡಿದರು.
 
ಕೇಂದ್ರ ಸರಕಾರ ರಾಜ್ಯದ ರೈತರಿಗಾಗಿ 2 ಸಾವಿರ ಕೋಟಿ ರೂಪಾಯಿಗಳ ಬರಪೀಡಿತ ಪರಿಹಾರ ಅನುದಾನವನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.
 
ರಾಜ್ಯದಲ್ಲಿ ನೀರಾವರಿ ಕೃಷಿಯನ್ನು ಹೆಚ್ಚಿಸಲು ನರ್ಮದಾ ನದಿಯಿಂದ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದ್ದು 36 ಲಕ್ಷ ಹೆಕ್ಟೆರ್‌ಗಳಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
 
ಯುಪಿಎ ಸರಕಾರದ ವೈಫಲ್ಯಗಳಿಂದಾಗಿ ಬೆಳೆ ವಿಮೆ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಗೆ ಬರಲಿಲ್ಲ. ಆದರೆ, ಮೋದಿ ಸರಕಾರ ರೈತರಿಗೆ ಅಗತ್ಯವಾದಷ್ಟು ಪರಿಪೂರ್ಣ ವಿಮೆ ನೀಡುವ ಯೋಜನೆ ಜಾರಿಗೆ ತಂದಿದೆ ಎಂದರು.
 
ಹೊಸ ಬೆಳೆ ವಿಮೆ ಯೋಜನೆಯಂತೆ ಒಂದು ವೇಳೆ, ಒಬ್ಬನೇ ಒಬ್ಬ ರೈತನ ಬೆಳೆ ನಾಶವಾದರೂ ಆ ರೈತನಿಗೆ ಬೆಳೆ ವಿಮೆ ದೊರೆಯಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದರು. 

ವೆಬ್ದುನಿಯಾವನ್ನು ಓದಿ